ಬೆಂಗಳೂರು, ಅಕ್ಟೋಬರ್ 10, 2021 (www.justkannada.in): ಮಾಹಿತಿ ತಂತ್ರಜ್ಞಾನ ಹಾಗೂ ನೆಟ್ವೆರ್ಕಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆ ಸಿಸ್ಕೊದ ವರದಿಯೊಂದರ ಪ್ರಕಾರ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಇಂಟೆರ್ನೆಟ್ ದುರ್ಬಳಕೆಯ ಪ್ರಮಾಣ ೨.೪ ಪಟ್ಟು ಹೆಚ್ಚಾಗಿತ್ತಂತೆ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಹೈಬ್ರಿಡ್ ಕಾರ್ಯಪಡೆಯ ವಿರುದ್ಧ (ಅಂದರೆ ಮನೆಯಿಂದಲೇ ಅಥವಾ ದೂರದಿಂದ ಕೆಲಸ ಮಾಡುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು) ಪ್ರತಿ ದಿನ ೧೦೦ ದಶಲಕಷದಷ್ಟು ದುರುಪಯೋಗ ಪ್ರಯತ್ನಗಳು ನಡೆದಿವೆಯಂತೆ.
ನೆಟ್ವರ್ಕಿAಗ್ ಕ್ಷೇತ್ರದ ಬೃಹತ್ ಸಂಸ್ಥೆ ಸಿಸ್ಕೊ ಬಿಡುಗಡೆಗೊಳಿಸಿರುವ ‘ಹೈಬ್ರಿಡ್ ವರ್ಕ್ ಇಂಡೆಕ್ಸ್’ ಎಂಬ ಜಾಗತಿಕ ಮಟ್ಟದ ವರದಿಯೊಂದರ ಪ್ರಕಾರ, “ಇದರಿಂದಾಗಿ ನಿಜವಾದ ಉದ್ಯೋಗಿಗಳಿಗೆ ಮಾತ್ರ ಕೆಲಸ ನಿರ್ವಹಿಸುವ ಸಂಪರ್ಕ (connectivity) ಲಭಿಸುವುದನ್ನು ಖಾತ್ರಿಪಡಿಸಲು ಹಾಗೂ ದುರುದ್ದೇಶಪೂರಿತ ಜನರ ಪ್ರಯತ್ನಗಳನ್ನು ತಡೆಗಟ್ಟಲು ಅಗತ್ಯವಿರುವ ಭದ್ರತಾ ಮೂಲಭೂತಸೌಕರ್ಯಗಳ ಪ್ರಾಮುಖ್ಯತೆ ತಿಳಿದು ಬರುತ್ತದೆ,” ಎಂದು ತಿಳಿಸಿದೆ.
ವಿಶ್ವದಾದ್ಯಂತ ರಾಷ್ಟçಗಳು ಸಾಮಾನ್ಯ ಪರಿಸ್ಥಿತಿಗೆ ಮರಳುತ್ತಿವೆ. ಈ ಸಮಯದಲ್ಲಿ ಹೈಬ್ರಿಡ್ ಕೆಲಸವನ್ನು (ಮನೆಯಿಂದಲೇ ಕೆಲಸ ನಿರ್ವಹಿಸುವ ಆಯ್ಕೆ) ಪರಿಷ್ಕರಿಸಲಾಗಿದ್ದು, ಸಮೀಕ್ಷೆ ನಡೆಸಿದ ಒಟ್ಟು ಜನರ ಪೈಕಿ ಶೇ.೬೪ರಷ್ಟು ಜನರು ನೇರವಾಗಿ ಕಚೇರಿಗೆ ಬಂದು ಕೆಲಸ ನಿರ್ವಹಿಸುವುದೇ ಉತ್ತಮ ಎಂದು ತಿಳಿಸಿದ್ದಾರೆ. ಕೇವಲ ಶೇ.೪೭ರಷ್ಟು ಜನರು ಮಾತ್ರ ಮುಂದಿನ ೬-೧೨ ತಿಂಗಳಲ್ಲಿ ತಮ್ಮ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವುದು ಬಿಟ್ಟು ನೇರವಾಗಿ ಕಚೇರಿಗೆ ಬಂದು ಕೆಲಸ ಮಾಡಿ ಎನ್ನುತ್ತವೆ ಎಂದು ಭಾವಿಸಿದ್ದರೆ. ಇದರಿಂದಾಗಿ ಮಾಲೀಕರು ದೂರದಲೇ ಕೆಲಸ ನಿರ್ವಹಿಸುವ ವಿಧಾನದ ಸಾಮರ್ಥ್ಯವನ್ನು ಸರಿಯಾಗಿ ಅಂದಾಜಿಸುವುದು ಅನಿಶ್ಚಿತವಾಗಿದೆ, ಎಂದು ಲಕ್ಷಾಂತರ ಅನಾಮಧೇಯ ಉದ್ಯೋಗಿಗಳ ದತ್ತಾಂಶವನ್ನು ಆಧರಿಸಿದ ವರದಿ ತಿಳಿಸುತ್ತದೆ.
ಸಿಸ್ಕೊದ ಮುಖ್ಯಸ್ಥ ಹಾಗೂ ಸಿಇಒ ಚಕ್ ರಾಬ್ಬಿನ್ಸ್ ಅವರ ಪ್ರಕಾರ, “ನಾವು ನಿಜವಾಗಿಯೂ ಪ್ರಸ್ತುತ ಕೆಲಸದ ವಿಧಾನವನ್ನು ಮರುವ್ಯಾಖ್ಯಾನಿಸುವ ಸಾಮರ್ಥ್ಯವುಳ್ಳ ಬಹಳ ವಿಶೇಷವಾದ ಸಂದರ್ಭದಲ್ಲಿದ್ದೇವೆ,” ಎಂದಿದ್ದಾರೆ.
ಭವಿಷ್ಯದಲ್ಲಿ ಹೈಬ್ರಿಡ್ ಕೆಲಸದ ವಿಧಾನದ ಕಡೆ ನಾವು ದಾಪುಗಾಲು ಹಾಕುತ್ತ್ತಿದ್ದು ಈ ಸಂದರ್ಭದಲ್ಲಿ ಬಹುಪಾಲು ಉದ್ಯೋಗಿಗಳು ದೂರದಿಂದ ಅಥವಾ ಮನೆಯಿಂದಲೇ ಕೆಲಸ ಮಾಡುವ ವಿಧಾನದಲ್ಲಿರುವ ಆರೋಗ್ಯ, ಯೋಗಕ್ಷೇಮ, ಯಾವಾಗಬೇಕಾದರೂ ಕೆಲಸ ಮಾಡುವಂತಹ ಸುಲಭ ಕೆಲಸದ ಸಮಯದಂತಹ ಹಲವು ವೈಯಕ್ತಿಕ ಲಾಭಗಳು ವೈಯಕ್ತಿಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಂಕ್ರಾಮಿಕಕ್ಕೂ ಮುಂಚೆ ಸಭೆಗಳಲ್ಲಿ ಪಾಲ್ಗೊಳ್ಳಲು ಜನರು ಶೇ.೯ರಷ್ಟು ಮೊಬೈಲ್ ಸಾಧನಗಳನ್ನು ಬಳಸುತ್ತಿದ್ದರು. ಆದರೆ ಸಾಂಕ್ರಾಮಿಕದ ನಂತರ ಇದರ ಪ್ರಮಾಣ ಶೇ.೨೭ಕ್ಕೆ ಏರಿಕೆಯಾಗಿದೆ. ಸಿಸ್ಕೊ ವೆಬೆಕ್ಸ್ ಮೂಲಕ ಪ್ರತಿ ತಿಂಗಳು ಜಗತ್ತಿನಾದ್ಯಂತ ೬೧ ದಶಲಕ್ಷ ಸಭೆಗಳು ನಡೆಯುತ್ತವೆ ಹಾಗೂ ಈ ಸಭೆಗಳಲ್ಲಿ ಮಾತನಾಡುವವರ ಸಂಖ್ಯೆ ಕೇವಲ ಶೇ.೪೮ರಷ್ಟಿದೆ.
ಮೇಲಾಗಿ ಶೇ.೯೮ರಷ್ಟು ಸಭೆಗಳಲ್ಲಿ ಕನಿಷ್ಠ ಒಬ್ಬರಾದರೂ ದೂರದಿಂದಲೇ ಸಭೆಗೆ ಹಾಜರಾಗುತ್ತಾರೆ – ಇದರಿಂದಾಗಿ ದೂರದಿಂದಲೇ ಭಾಗವಹಿಸುವ ವಿಧಾನದ ಪ್ರಾಮುಖ್ಯತೆ ಹೆಚ್ಚಾಗುವ ಸಾಧ್ಯತೆ ಇದೆ, ಎನ್ನುತ್ತದೆ ಸಿಸ್ಕೊ ವರದಿ.
ಸಮೀಕ್ಷೆಯಲ್ಲಿ ಭಾಗವಹಿಸಿದ ಒಟ್ಟು ಅಭ್ಯರ್ಥಿಗಳ ಪೈಕಿ ಶೇ.೮೨ರಷ್ಟು ಜನರು ಸಾಂಕ್ರಾಮಿಕದಿAದ ಚೇತರಿಸಿಕೊಳ್ಳಲು ಈ ರೀತಿ ದೂರದಿಂದಲೇ ಅಥವಾ ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಅತ್ಯಂತ ನಿರ್ಣಾಯಕ ಎಂದಿದ್ದಾರೆ. ಜನವರಿ ೨೦೨೦ರಿಂದ ಆಗಸ್ಟ್ ೨೦೨೧ರ ನಡುವೆ ಕ್ಲೌಡ್ ಸೇವೆಗಳನ್ನು ಒದಗಿಸುವ ನೆಟ್ವರ್ಕ್ಗಳ ಒಟ್ಟು ಔಟೇಜ್ ಇನ್ಸಿಡೆಂಟ್ ವಾಲ್ಯೂಮ್ನ ಕೇವಲ ಶೇ.೫ರಷ್ಟಿತ್ತು. ಉಳಿದ ಶೇ.೯೫ರಷ್ಟು ಔಟೇಜ್ ಇನ್ಸಿಡೆಂಟ್ ವಾಲ್ಯೂಮ್ಗೆ ಐಎಸ್ಪಿ ನೆಟ್ವರ್ಕ್ ಬಳಕೆಯಾಗಿದೆ. ಕಚೇರಿ ಆಧಾರಿತ ವೈಫೈ ಸಂಪರ್ಕಜಾಲಗಳಿಗೆ ಸಂಪರ್ಕ ಹೊಂದುವ ಸಾಧನಗಳ ಪ್ರಮಾಣ ಆರು ತಿಂಗಳ ಹಿಂದಿನ ಪ್ರಮಾಣದ ಹೋಲಿಕೆಯಲ್ಲಿ ಶೇ.೬೧ರಷ್ಟು ಹೆಚ್ಚಾಯಿತು, ಎಂದು ವರದಿ ತಿಳಿಸಿದೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
key words: 100 million email threats: Cisco report