ಬೆಂಗಳೂರು,ಆಗಸ್ಟ್,22,2024 (www.justkannada.in) : ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯ ಬಂದರೂ ಆಗಲ್ಲ ಎಂದಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹೆಚ್ ಡಿಕೆ ಬಂಧಿಸಲು ನೂರು ಜನರ ಅವಶ್ಯಕತೆ ಇಲ್ಲ. ಕಾನೂನಿನಲ್ಲಿ ಬಂಧಿಸಲು ಅವಕಾಶವಿದೆ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯಪಾಲರ ಬಳಿ ಇರುವ ಫೈಲ್ ಗಳ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯ ವಿಚಾರ ಇಂದು ಏನಾಗುತ್ತೆ ನೋಡಬೇಕು. ಸಭೆ ಮಾಡಿದ್ರೆ ಸಿಎಂ ಸೇಫ್ ಮಾಡೋಕೆ ಹೊರಟಿದ್ದಾರೆ ಅಂತಾರೆ. ಅದರಲ್ಲಿ ಏನಿದೆ. ನಾವು ಸಿಎಂ ಪರ ಇದ್ದೇವೆ ಎಂದರು.
ಹೆಚ್ ಡಿಕೆ ಪ್ರಾಸಿಕ್ಯೂಷನ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಕಾನೂನು ಹೋರಾಟಕ್ಕೆ ಯಾವುದೇ ತಡೆ ಇಲ್ಲ ಕುಮಾರಸ್ವಾಮಿ ಹಾಗೂ ನಾಲ್ಕೈದು ಜನರ ಬಗ್ಗೆ ಕೇಳಿದೆ. ಎಸ್ ಐಟಿ ಈ ಬಗ್ಗೆ ಗವರ್ನರ್ ಅನುಮತಿ ಕೇಳಿದೆ. ಲೋಕಾಯುಕ್ತ ಅಧಿಕಾರಿಗಳು ಯಾಕೆ ಪ್ರಾಸಿಕ್ಯೂಷನ್ ಗೆ ಕೇಳಿದ್ದಾರೆ. ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ ಎಂದರು.
ಸಿಎಂ ದೆಹಲಿಗೆ ತೆರಳುವ ವಿಚಾರ, ದೆಹಲಿಗೆ ಬರುವಂತೆ ಹೈಕಮಾಂಡ್ ನನ್ನನ್ನು ಕರೆದಿಲ್ಲ. ಸಿಎಂ ಕರೆದರೆ ನಾನು ದೆಹಲಿಗೆ ಹೋಗುತ್ತೇನೆ ಎಂದರು.
Key words: 100 people, arrest, HDK , Home Minister, Dr. G. Parameshwar