ಬೆಂಗಳೂರು, ನವೆಂಬರ್,19,2024 (www.justkannada.in): ರಾಜ್ಯದಲ್ಲಿ 1006 ಕ್ರಿಮಿನಲ್ ಕಂಟೆಂಪ್ಟ್ ಕೇಸ್ (ಕೋರ್ಟ್ ನಿಂಧನೆ) ಗಳಿವೆ. ಇವುಗಳನ್ನ ಮಾರ್ಚ್ 31 ರೊಳಗೆ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಾಕೀತು ಮಾಡಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಕೆ ಪಾಟೀಲ್, ಅರ್ಬಿಟ್ರೇಷನ್ ಕ್ಲಾಸ್ ವಿಥ್ ಡ್ರಾ ಮಾಡಲಾಗಿದೆ. ಮೊದಲು ಮಸ್ಟ್ ಅಂತ ಇತ್ತು. ಅದನ್ನ ಕಾನೂನಿನ ಸರ್ಕೂಲರ್ ನಿಂದ ತೆಗೆದಿದ್ದೇವೆ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುವ ಹಿನ್ನೆಲೆ. ಈ ಅರ್ಬಿಟ್ರೇಷನ್ ಕ್ಲಾಸ್ ವಿಥ್ ಡ್ರಾ ಮಾಡಿದ್ದೇವೆ. ಅರ್ಬಿಟ್ರೇಷನ್ ನಡಿ ಹಲವು ಪ್ರಕರಣ ಇದ್ದವು. ಕಂಪನಿಗಳಿಗೆ ಇದರಿಂದ ಲಾಭ ಆಗಬಾರದು. ಸರ್ಕಾರಕ್ಕೆ ಅನುಕೂಲವಾಗುವಂತಿರಬೇಕು. ಈ ಮಧ್ಯಸ್ಥಿಕೆ ಪ್ರಕರಣದಿಂದ ಸರ್ಕಾರಕ್ಕೆ ಬರ್ಡನ್ . ಬೊಕ್ಕಸಕ್ಕೆ ಹೆಚ್ಚುವರಿ ಹೊರೆಬರದಂತೆ ನೋಡಿಕೊಳ್ಳುವುದು ಕಾಮಗಾರಿಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು. ಈ ದೃಷ್ಟಿಯಿಂದ ನಾವು : ಮಧ್ಯಸ್ಥಿಕೆ ಪ್ರಕರಣ ಕೈಬಿಟ್ಟಿದ್ದೇವೆ ಎಂದರು.
ಕೋರ್ಟ್ ಗಳು ಕೆಲವು ಸೂಚನೆ ಕೊಟ್ಟಿವೆ, ಅದನ್ನಅಧಿಕಾರಿಗಳು ಪಾಲಿಸದ ಸಂದರ್ಭ ಆಗ ಅದು ಕ್ರಿಮಿನಲ್ ಕಂಟೆಂಪ್ಟ್ ಆಗಲಿದೆ . ರಾಜ್ಯದಲ್ಲಿ 1006 ಕ್ರಿಮಿನಲ್ ಕಂಟೆಂಟ್ಪ್ ಕೇಸ್ ಗಳಿವೆ. ಕಳೆದ 10 ವರ್ಷಗಳಲ್ಲಿ ಈ ಪ್ರಕರಣ ಸಂಖ್ಯೆ ಹೆಚ್ಚಿವೆ. ಕೋರ್ಟ್ ಆದೇಶಗಳನ್ನ ಪಾಲಿಸಬೇಕು. ಆದರೆ ಅದನ್ನೂ ಅಗೌರವಿಸುವ ವರ್ತನೆ ನಡೆದಿವೆ. ಈ ಕಂಟೆಂಟ್ ಕೇಸ್ ಸಂಖ್ಯೆ ಕಡಿಮೆ ಆಗಬೇಕು. ಕೋರ್ಟ್ ಅಭಿಪ್ರಾಯ,ಸೂಚನೆ ಪಾಲಿಸಬೇಕು. ಕಟ್ಟು ನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋರ್ಟ್ ನಿರ್ದೇಶನಗಳ್ನು ಪಾಲಿಸಬೇಕು. ಈ ಸಂಬಂಧ ನ್ಯಾಯಾಲಯಕ್ಕೆ ಮಾಹಿತಿ, ಸಮಜಾಯಿಷಿ ಒದಗಿಸಬೇಕು ಎಂದರು.
ಇರುವ 1006 ಪ್ರಕರಣಗಳನ್ನ ವಿಲೇವಾರಿ ಮಾಡಬೇಕು. ಮಾರ್ಚ್ 31 ರೊಳಗೆ ವಿಲೇವಾರಿಗೊಳಿಸಬೇಕು. ನಾಲ್ಕು ಡಿಜಿಟ್ ನಿಂದ ಎರಡು ಡಿಜಿಟ್ ಗೆ ತರಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಾಕೀತು ಮಾಡಿದರು.
ಕಾನೂನು ಇಲಾಖೆ ಸುಧಾರಣೆಗೆ ಕ್ರಮ ವಹಿಸಿದ್ದೇವೆ. 2500 ಇಂತಹ ಕಂಟೆಂಟ್ ಪ್ರಕರಣ ಇದ್ದವು. ಅವು ಇದೀಗ 1006 ಕ್ಕೆ ಬಂದು ನಿಂತಿವೆ. ಕಂಟೆಂಟ್ಪ್ ಕೇಸ್ ಗಳು ಕಂದಾಯ, ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿವೆ ಎಂದರು.
Key words: 1006 criminal content cases, Minister, H.K. Patil