ಮೈಸೂರು,ಜನವರಿ,4,2021(www.justkannada.in): ಐತಿಹಾಸಿಕ ಮೈಸೂರಿನ ಲಲಿತ್ ಮಹಲ್ ಹೋಟೆಲ್ ಗೆ 100ರ ಸಂಭ್ರಮವಾಗಿದ್ದು ಮುಂದಿನ ನವೆಂಬರ್ ತಿಂಗಳಿಗೆ ಶತಮಾನೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ಜಂಗಲ್ ಲಾಡ್ಜ್ ಗಳು ಮತ್ತು ರೆಸಾರ್ಟ್ಸ್ ಲಿಮಿಟೆಡ್ ನ ಅಧ್ಯಕ್ಷ ಎಂ.ಅಪ್ಪಣ್ಣ ತಿಳಿಸಿದರು.
ಮೈಸೂರಿನ ಲಲಿತ ಮಹಲ್ ಪ್ಯಾಲೆಸ್ ಹೋಟಲ್ ಗೆ ಅಧ್ಯಕ್ಷ ಎಂ.ಅಪ್ಪಣ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ. ಅಪ್ಪಣ್ಣ, ಲಲಿತ ಮಹಲ್ ಹೋಟೆಲ್ ದೇಶದ ಎರಿಟೇಜ್ ಕಟ್ಟಡಗಳಲ್ಲಿ ಒಂದು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿರುವ ಕಟ್ಟಡ ನವೆಂಬರ್ ಗೆ 100ನೇ ವರ್ಷ ಪೂರೈಸುತ್ತದೆ. ಈ ಹಿನ್ನೆಲೆ ಶತಮಾನೋತ್ಸವ ಸಂಭ್ರಮಾಚರಣೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಂತ್ರಿಗಳನ್ನು ಆಹ್ವಾನಿಸುತ್ತೇವೆ ಎಂದು ಮಾಹಿತಿ ನೀಡಿದರು.
51 ಎಕರೆ 15 ಗುಂಟೆ ಜಾಗದಲ್ಲಿರುವ ಲಲಿತ ಮಹಲ್ ಹೋಟೆಲ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಟ್ಟಿರುವ ಕೊಡುಗೆ. ನೂರನೇ ವರ್ಷದ ಸಂಭ್ರಮದ ಹಿನ್ನೆಲೆ ಹೋಟೆಲ್ ವೀಕ್ಷಣೆ ಮಾಡಿದೆವು. 1920ರಲ್ಲಿ ಕೇವಲ 13 ಲಕ್ಷ ಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಆಗಿನ ಮೈಸೂರು ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜು ಅರಸು ಅವರು ಸರ್ಕಾರದ ಆಡಳಿತಕ್ಕೆ ರಾಜರಿಂದ ಹಸ್ತಾಂತರವಾಗಿದೆ. ನಮ್ಮ ಆಸ್ತಿಯನ್ನ ಯಾರು ಕಬಳಿಸಿಲ್ಲ ಆದರೆ ಕೆಲವೆಡೆ ಬೇಲಿಗಳು ಕಿತ್ತುಹೋಗಿದೆ. ಅದನ್ನ ಬಂದೂಬಸ್ತ್ ಮಾಡಿದ್ದೇವೆ ಅಷ್ಟೇ ಎಂದು ಎಂ.ಅಪ್ಪಣ್ಣ ತಿಳಿಸಿದರು.
ಲಲಿತ್ ಮಹಲ್ ಹೋಟೆಲ್ ನಲ್ಲಿ ಸಾಮಾನ್ಯ ಜನರು ಬಂದು ಹೋಗಬೇಕು…
ಲಲಿತ್ ಮಹಲ್ ಹೋಟೆಲ್ ನಲ್ಲಿ ಸಾಮಾನ್ಯ ಜನರು ಬಂದು ಹೋಗಬೇಕು. ಕೂಡಲೇ ಹೋಟೆಲ್ ನಲ್ಲಿ ಸಿಗುವ ಸೌಲಭ್ಯಗಳ ಎಲ್ಲ ದರಗಳನ್ನು ಕಡಿಮೆಗೊಳಿಸುತ್ತೇವೆ. ಲಲಿತ ಮಹಲ್ ಹೋಟೆಲ್ ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವಂತಾಗಿದೆ. ಇದನ್ನ ತಪ್ಪಿಸಲು ಮುಂದಿನ ದಿನಗಳಲ್ಲಿ ಸ್ಥಳೀಯರು ಹಾಗೂ ಬಡವರು ಬರುವಂತಾಗಬೇಕು. ಈ ಹಿನ್ನೆಲೆ ಎರಡು ದಿನಗಳ ಬಳಿಕ ಬೋರ್ಡ್ ಮೀಟಿಂಗ್ ಮಾಡಲಿದ್ದೇವೆ. ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ ಎಂದು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಲಿಮಿಟೆಡ್ ನ ಅಧ್ಯಕ್ಷ ಎಂ.ಅಪ್ಪಣ್ಣ ತಿಳಿಸಿದರು.
Key words: 100th– celebration – historic -Lalit Mahal Hotel – Mysore- Centenary celebration- mysore