ಮೈಸೂರು,ಸೆಪ್ಟಂಬರ್,7,2021(www.justkannada.in): ಕನಿಷ್ಠ ಸೌಲಭ್ಯವೂ ಇಲ್ಲದ ಕುಗ್ರಾಮದವರಾದ ಗಡಿ ಜಿಲ್ಲೆ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮದ ರೈತನ ಮಗಳು ಸ್ನಾತಕೋತ್ತರ ಪದವಿ ಕನ್ನಡದ ವಿಷಯದಲ್ಲಿ 10 ಚಿನ್ನದ ಪದಕ, ನಾಲ್ಕು ನಗದು ಬಹುಮಾನ ಬಹುಮಾನ ಪಡೆದು ಶೈಕ್ಷಣಿಕ ವಲಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ರೈತರಾದ ಟಿ.ಎಂ. ಶಿವಮಲ್ಲಪ್ಪ ಮತ್ತು ನೀಲಾಂಬಿಕಾ ದಂಪತಿ ನಾಲ್ಕನೇ ಪುತ್ರಿಯಾದ ಟಿ.ಎಸ್.ಮಾದಲಾಂಬಿಕೆ ಮೈಸೂರು ಮೈಸೂರು ವಿಶ್ವವಿದ್ಯಾನಿಲಯದ 101 ನೇ ಘಟಿಕೋತ್ಸವದಲ್ಲಿ ಪ್ರಥಮ ರ್ಯಾಂಕಿನೊಂದಿಗೆ ಕನ್ನಡ ಎಂಎ ಪದವಿ ಪಡೆದಿದ್ದಾರೆ.
ಕೃಷಿಕರಾದ ಇವರ ತಂದೆ 8ನೇ ತರಗತಿ ಓದಿದ್ದರು. ಮಗಳು ಚೆನ್ನಾಗಿ ಓದಲಿ ಎಂದು ಉತ್ತಮ ವ್ಯಾಸಂಗ ಕೊಡಿಸಲು ತೀರ್ಮಾನಿಸಿದರು.
ಮಗಳ ಸಾಧನೆ ನೋಡಲು ಅಪ್ಪನೇ ಇಲ್ಲ
ಅಪ್ಪನ ನಿರೀಕ್ಷೆಯಂತೆ ಮಾದಲಾಂಬಿಕೆ ಬಿಎಯನ್ನು ಶೇ. 80 ಪರ್ಸೆಂಟೇಜ್ ನೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. ನಂತರ ಚಾಮರಾಜನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇಡಿಯನ್ನು ಅತ್ಯುನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾದರು.
“ಎಂಎ ಪ್ರಥಮ ಸೆಮಿಸ್ಟರ್ ಪರೀಕ್ಷೆ ಶುಲ್ಕ ಪಾವತಿಸಿದ ದಿನವೇ ಅಪ್ಪ ಅಕಾಲಿಕವಾಗಿ ನಿಧನರಾದರು. ನಾಲ್ವರು ಹೆಣ್ಣು ಮಕ್ಕಳು. ನಾನೇ ಕೊನೆಯವಳು, ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಆದರೆ, ತಾಯಿ, ಶಿಕ್ಷಕಿಯಾದ ಅಕ್ಕ ರಾಜೇಶ್ವರಿ ಉನ್ನತ ಶಿಕ್ಷಣ ಪಡೆಯಲು ನೆರವಾದರು” ಎಂದು ಮಾದಲಾಂಬಿಕೆ ತಿಳಿಸಿದ್ದಾರೆ.
10 ಮೆಡಲ್ ನಿರೀಕ್ಷಿಸಿರಲಿಲ್ಲ
10 ಚಿನ್ನದ ಪದಕಗಳು ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಜತೆಗೆ ನಾಲ್ಕು ನಗದು ಬಹುಮಾನ ಬಂದಿರುವುದು ಅತ್ಯಂತ ಖುಷಿಯಾಗಿದೆ. ಮಾರ್ಗದರ್ಶನ ಮಾಡಿದ ನನ್ನೆಲ್ಲಾ ಅಧ್ಯಾಪಕರಿಗೆ ಇದು ಸಲ್ಲಬೇಕು. ಗುರುಗಳಾದ ಡಾ.ಕೃಷ್ಣಮೂರ್ತಿ ಹನೂರು ಅವರ ಪಾಠ ಕೇಳುವ ಅವಕಾಶ ದೊರೆತದ್ದು ಜೀವನವನ್ನು ಬದಲಾಯಿಸಿತು. ಎನ್ ಇಟಿ ಪರೀಕ್ಷೆ ಪಾಸು ಮಾಡಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುವ ಗುರಿ ಹೊಂದಿರುವೆ ಎಂದು ಮಾದಲಾಂಬಿಕೆ ಸಂತಸ ವ್ಯಕ್ತಪಡಿಸಿದ್ದಾರೆ.
ENGLISH SUMMARY…
Chamarajanagara farmer’s daughter earns 10 gold medals in academics
Mysuru, September 7, 2021 (www.justkannada.in): The daughter of a farmer from a remote village in Chamarajanagara District has set an example to the youth by earning 10 gold medals and four cash prizes at the 101st Convocation of the University of Mysore.
T.S. Maadalambika is the fourth daughter of farmer T.M. Shivamallappa and Neelambika. She has secured first rank in M.A. Kannada, University of Mysore. She received the medals at the 101st Convocation held at the Crawford Hall in Mysuru today.
Her father who was a farmer has studied only up to the 8th standard. However, he wanted his daughter to provide good education. He expired while Maadalambika was in her first semester.
She aspires to become a teacher in the future.
Keywords: University of Mysore/ 101st Convocation/ T.S. Maadalambika/ MA Kannada/ 10 gold medals
Key words: 101st convocation – Mysore university- 10 Gold medal – Chamarajanagar- farmer’s- daughter