ನವದೆಹಲಿ,ಜೂ,25,2020(www.justkannada.in): ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಈ ನಡುವೆ ಸಿಬಿಎಸ್ ಯ 10 ಮತ್ತು 12 ನೇ ತರಗತಿಯ ಪರೀಕ್ಷೆಗಳನ್ನ ರದ್ಧು ಮಾಡಲಾಗಿದೆ.
ಜುಲೈ 1 ರಿಂದ ಜುಲೈ 15 ರವರೆಗೆ ಸಿಬಿಎಸ್ ಸಿ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನ ನಿಗದಿ ಮಾಡಲಾಗಿತ್ತು. ಸಿಬಿಎಸ್ಸಿ ಪರೀಕ್ಷೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಇಂದು ಸ್ಪಷ್ಟವಾದ ನಿರ್ಧಾರವನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್ ಸಿಬಿಎಸ್ಸಿ ಪರೀಕ್ಷಾ ಮಂಡಳಿಗೆ ಸೂಚಿಸಿತ್ತು, ಈ ಹಿನ್ನೆಲೆ ಇದೀಗ ಸಿಬಿಎಸ್ ಸಿ ಪರೀಕ್ಷಾ ಮಂಡಳಿ 10 ಮತ್ತು 12 ನೇ ತರಗತಿ ಪರೀಕ್ಷೆಯನ್ನ ರದ್ದು ಪಡಿಸಿದೆ.
ಈ ಕುರಿತು ಸುಪ್ರೀಂಕೋರ್ಟ್ ಗೆ ಸಾಲಿಸಿಟರ್ ಜನರಲ್ ಮಾಹಿತಿ ನೀಡಿದ್ದು ಜುಲೈ 1ರಿಂದ ಜುಲೈ 15ರವರೆಗೆ ನಿಗಧಿಪಡಿಸಲಾಗಿದ್ದಂತ ಸಿ ಬಿ ಎಸ್ ಸಿ ಯ 10 ಮತ್ತು 12ನೇ ತರಗತಿ ಪರೀಕ್ಷೆಯನ್ನು ಸಿಬಿ ಎಸ್ಸಿ ಪರೀಕ್ಷಾ ಮಂಡಳಿ ರದ್ದು ಪಡಿಸಿಲಾಗಿದೆ. ಹಿಂದಿನ ಮೂರು ಪರೀಕ್ಷೆಗಳ ಆಧಾರಲ್ಲಿ 12 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನೀಡಲು ನಿರ್ಧರಿಸಲಾಗಿದೆ ಪರೀಕ್ಷೆ ನಡೆಸಲು ಒಡಿಶಾ ಮತ್ತು ತಮಿಳುನಾಡು ಸಮ್ಮತಿಸಿಲ್ಲ ಎಂದು ತಿಳಿಸಿದ್ದಾರೆ.
Key words: 10th & 12th -CBSC –Exam- Cancellation