ಬೆಂಗಳೂರು,ಜೂನ್,6,2023(www.justkannada.in): ವಾರ್ತಾ ಮತ್ತು ಪ್ರಸಾರ ಇಲಾಖೆ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾಗೆಯೇ 11 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ, ಐಎಎಸ್ ಅಧಿಕಾರಿ ಉಮಾಶಂಕರ್ ಎಸ್ ಆರ್ ಅವರನ್ನು ಸಹಕಾರ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿದೆ.
ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ.
ಕಪಿಲ್ ಮೋಹನ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರವಾಸೋದ್ಯಮ
ಉಮಾಶಂಕರ್ -ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ
ಮಂಜುನಾಥ್ ಪ್ರಸಾದ್- ಪ್ರದಾನ ಕಾರ್ಯದರ್ಶಿ, ಸಹಕಾರ ಇಲಾಖೆ
ಅನ್ಬುಕುಮಾರ್ –ಕಾರ್ಯದರ್ಶಿ, ಕೃಷಿ ಇಲಾಖೆ
ಮೋಹನ್ ರಾಜ್- ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ
ರಿಚರ್ಡ್ ಡಿಸೋಜ –ಕಾರ್ಯದರ್ಶಿ, ಎಂಎಸ್ ಎಂಇ ಮತ್ತು ಮೈನ್ ಇಲಾಖೆ
ಗಿರೀಶ್ –ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ
ಕರೇಗೌಡ- ಅಟಲ್ ಜನಸ್ನೇಹಿ ಕೇಂದ್ರ. ನಿರ್ದೇಶಕರು
ಪಾಟೀಲ್ ಯಲಗೌಡ ಶೀವನಗೌಡ –ಕೃಷಿ ಇಲಾಖೆ, ಆಯುಕ್ತ
ಜಗದೀಶ್ –ಎಂಡಿ, ಪ್ರವಾಸೋದ್ಯಮ
ಡಾ. ಮಹೇಶ್ –ಸಿ ಇಒ, ಕೆಐಎಡಿಬಿ
Key words: 11 IAS Officers- Transfer -Hemant Nimbalkar – Commissioner -News and Broadcasting Department.