ನವದೆಹಲಿ, ಜನವರಿ 1, 2022 (www.justkannada.in): ಜಮ್ಮುವಿನಲ್ಲಿರುವ ಮಾತಾ ಶ್ರೀ ವೈಷ್ಣೋದೇವಿ ದೇವಾಲಯದಲ್ಲಿ ಜನರ ನೂಕುನುಗ್ಗಲಿನಿಂದಾಗಿ 12 ಮಂದಿ ಮೃತಪಟ್ಟು ೧೨ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಹೆಚ್ಚಿನ ಸಂಖ್ಯೆಯ ಭಕ್ತರ ನೆರೆದಿದ್ದು ನೂಕುನುಗ್ಗಲು ಉಂಟಾಗಿ ಈ ಘಟನೆ ಜರುಗಿದೆ. ಅಧಿಕೃತ ಮೂಲಗಳ ಪ್ರಕಾರ ಈ ಘಟನೆ ತ್ರಿಕೂಟ ಬೆಟ್ಟಗಳ ಮೇಲಿರುವ ದೇವಾಲಯದ ಗರ್ಭಗುಡಿಯ ಆಚೆ ನಡೆದಿದೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದು, ಈ ಸಮಯದಲ್ಲಿ ನೂಕುನುಗ್ಗಲು ಉಂಟಾಗಿದೆ. ಒಮ್ಮೆಗೆ ಅನೇಕ ಜನರು ದೇವಾಲಯದ ಒಳಗೆ ನುಗ್ಗಿದ್ದಾರೆ.
ಮಾತಾ ವೈಷ್ಣೋದೇವಿ ದೇವಾಲಯದಲ್ಲಿ ಜರುಗಿರುವ ಈ ದುರ್ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ನಿಗಾವಣೆ ವಹಿಸಿದ್ದಾರೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ತಮ್ಮ ಟ್ವೀಟ್ ಒಂದರಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪ್ರಧಾನ ಮೋದಿಯವರು ತಮ್ಮ ಸಂತಾಪವನ್ನು ತಿಳಿಸಿದ್ದು, ಗಾಯಗೊಂಡಿರುವಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವನ್ನು ಒದಗಿಸುವಂತೆ ಸೂಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಎಲ್ಜಿ ಮನೋಜ್ ಸಿನ್ಹಾ ಅವರು ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಜಮ್ಮುವಿನ ಎಡಿಜಿಪಿ ಹಾಗೂ ವಿಭಾಗೀಯ ಆಯುಕ್ತರೊಂದಿಗೆ ಪ್ರಧಾನ ಕಾರ್ಯದರ್ಶಿ (ಗೃಹ) ಅವರನ್ನು ಒಳಗೊಂಡಿರುವ ತನಿಖಾ ಸಮಿತಿ ಈ ಘಟನೆಯ ಕುರಿತು ತನಿಖೆಯನ್ನು ನಡೆಸಲಿದೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ರೂ.10 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ರೂ.2 ಲಕ್ಷ ಪರಿಹಾರ ವಿತರಿಸುವಂತೆ ಸೂಚಿಸಲಾಗಿದೆ.
Key words: 12 Dead – stampede – Vaishno Devi -shrine – Jammu
ENGLISH SUMMARY..
12 Dead in a stampede at Vaishno Devi shrine in Jammu
At least 12 devotees have died and over a dozen others injured in a stampede at Jammu Mata Vaishno Devi shrine. The stampede was triggered by a massive rush of devotees. According to official sources the incident occurred outside the sanctum sanctorum of the shrine on Trikuta hills.
They said a large number of devotees had gathered at the shrine to pay their obeisance to mark the new year. Due to massive rush, a large number of devotees entered the Vaishno Devi Bhawan.
Union Minister Dr Jitendra Singh in a tweet said that Prime Minister Narendra Modi is personally monitoring and keeping track of the tragic situation arising out of stampede at Mata VaishnoDevi shrine. PM has conveyed his sympathies to bereaved families and issued instructions to provide all possible medical aid & assistance to the injured.
Jammu & Kashmir LG Manoj Sinha ordered a high-level inquiry into today’s #stampede. The Inquiry Committee will be headed by Principal Secretary (Home) with ADGP, Jammu and Divisional Commissioner, Jammu as members.
An ex-gratia of Rs 10 lakh for the next of kin of those who died in the stampede at Mata Vaishno Devi Bhawan in Katra; Rs 2 lakh for the injured: J&K LG Manoj Sinha