ಬೆಂಗಳೂರು, ಆಗಸ್ಟ್ 22, 2021 (www.justkannada.in): ಕರ್ನಾಟಕದಲ್ಲಿ ಕೋವಿಡ್ ಲಸಿಕೆ ಪಡೆದ ಒಟ್ಟು 13,768 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಅಂಕಿ ಅಂಶಗಳು ಈ ವಿಷಯವನ್ನು ಖಚಿತ ಪಡಿಸಿವೆ. ಲಸಿಕೆ ಪಡೆದ ಒಟ್ಟು ಸೋಂಕಿತರ ಪೈಕಿ 13,768 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಕೊವಿಶೀಲ್ಡ್ ಲಸಿಕೆ ಪಡೆದ 11,150 ಜನರು ಹಾಗೂ ಕೊವ್ಯಾಕ್ಸಿನ್ ಲಸಿಕೆ ಪಡೆದ 2,618 ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಮೊದಲ ಡೋಸ್ ಕೊವಿಶೀಲ್ಡ್ ಲಸಿಕೆ ಪಡೆದವರಲ್ಲಿ 9,030 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಎರಡೂ ಡೋಸ್ ಲಸಿಕೆ ಕೊವಿಶೀಲ್ಡ್ ಲಸಿಕೆ ಪಡೆದ 2,120 ಜನರಿಗೆ ಕೊವಿಡ್ ದೃಢಪಟ್ಟಿದೆ.