ಮೈಸೂರು,ಜೂ,11,2019(www.justkannada.in): ಮೈಸೂರಿನ ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯ ಆವರಣದಲ್ಲಿ ಇಂದು ಚಮತ್ಕಾರಿ ಸೀಡ್ ಬಾಲ್ ಗಳ ತಯಾರಿಕೆ ಕುರಿತು ಕಾರ್ಯಗಾರ ಆಯೋಜಿಸಲಾಗಿತ್ತು.
ಕಾರ್ಯಗಾರದಲ್ಲಿ 14 ಕೆರೆಗಳ ನಿರ್ಮಾತೃ ಕಾಮೇಗೌಡರು ಪಾಲ್ಗೊಂಡಿದ್ದರು. ಇದೇ ವೇಳೆ ಕಾಮೇಗೌಡರು ವಿದ್ಯಾರ್ಥಿಗಳ ಜೊತೆಯಲ್ಲಿ ಸಂವಾದ ನಡೆಸಿದರು. ಸಂವಾದದಲ್ಲಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕಾದ ಅಗತ್ಯ ಇದೆ.. ಮುಂದಿನ ಪೀಳಿಗೆ ಸುರಕ್ಷಿತ ವಾಗಿ ಇರಬೇಕಾದರೆ ಅರಣ್ಯವನ್ನ ಕಾಪಾಡಬೇಕಾದ ಅವಶ್ಯಕತೆ ಇದೆ. ಮೊದಲು ನಾವು ಸಾರ್ವಜನಿಕರಲ್ಲಿ ಗಿಡ ಮರಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೇರಳ ಹಾಗೂ ಕೊಡಗಿನಲ್ಲಿ ಉಂಟಾದ ಭೂ ಕುಸಿತದಂತಹ ಪ್ರಕೃತಿ ವಿಕೋಪ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳು ಸುಮಾರು ೨ ಲಕ್ಷ ಸೀಡ್ ಬಾಲ್ ತಯಾರಿಕೆ ಮಾಡಿದ್ದು, ವಿದ್ಯಾರ್ಥಿಗಳು ತಯಾರಿಸಿದ ಸೀಡ್ ಬಾಲ್ ಗಳನ್ನ ವಿಜಯ ನಗರದ 3ನೇ ಹಂತದಲ್ಲಿ ಇರುವ ಕೆರೆಯ ಸುತ್ತ ನೆಡಲು ಚಿಂತನೆ ನಡೆಸಲಾಗಿದೆ.
Key words: 14 lakes -Kamegowda –mysore 2 lakh -seed ball – students.