ಮೈಸೂರು,ಆ,9,2019(www.justkannada.in): ಧಾರಾಕಾರ ಮಳೆಯಿಂದಾಗಿ ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಎಲ್ಲರೂ ಸಹಾಯ ಹಸ್ತ ಚಾಚುವಂತೆ ಉಡುಪಿ ಮಠದ ಪೇಜಾವರ ಶ್ರೀಗಳು ಮನವಿ ಮಾಡಿದ್ದಾರೆ.
ಇಂದು ಸಂಜೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆ ಬಂದು ಅಲ್ಲಿನ ಜನಜೀವನ ಅಸ್ತವ್ಯಸ್ತ ಗೊಂಡಿದೆ. ದೇಶ ವಿದೇಶ ಕನ್ನಡಿಗರು ಹಾಗೂ ಕನ್ನಡೇತರರು ಜನರ ಸಹಾಯಕ್ಕೆ ಆಗಮಿಸಿ ಎಂದು ಮನವಿ ಮಾಡಿದರು.
ಉಡುಪಿ ಮಠದಿಂದ 14 ಲಕ್ಷ.ರೂಗಳನ್ನು ಬಿಡುಗಡೆ ಮಾಡಲಾಗುತ್ತದೆ. ಸಹಾಯ ಮಾಡುವವರು ಉಡುಪಿ ಮಠ, ಮೈಸೂರಿನ ಕೃಷ್ಣಧಾಮ ಮಠಕ್ಕೂ ಬಂದಯ ಆರ್ಥಿಕ ನೆರವು ನೀಡಬಹುದು. ಚಾಥುರ್ಮಾಸದ ಬಳಿಕ ಖುದ್ದಾಗಿ ಅಲ್ಲಿನ ಹಳ್ಳಿಗಳಗೆ ಭೇಟಿ ನೀಡಿ ಜನರ ಸಮಸ್ಯೆ ಅಲಿಸುವೇ.ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಅಲ್ಲಿನ ಜನರಿಗೆ ಆರ್ಥಿಕ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ನೇರವು ನೀಡಬೇಕಾದ ಅವಶ್ಯವಿದೆ. ಅಲ್ಲಿನ ಜನರ ಕಷ್ಟಗಳಿಗೆ ಸ್ವಲ್ಪವಾದರು ನೆರವಿಗೆ ಧಾವಿಸೋಣ ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದು ಕುರಿತು ಪ್ರತಿಕ್ರಿಯಿಸಿದ ಅವರು, ಆರ್ಟಿಕಲ್ 370 ರದ್ದು ಮಾಡಿದ್ದು ಸ್ವಾಗತಾರ್ಹ. ಆಗಿನ ಕಾಲದಲ್ಲಿ ನೆಹರು ಅವರು ಮಾಡಿದ್ದು ದೊಡ್ಡ ತಪ್ಪಲ್ಲ. ಅನಿವಾರ್ಯ ಕಾರಣದಿಂದ ಅವರು ಆ ನಿರ್ಧಾರಕ್ಕೆ ಒಳಗಾದ್ರು. ಮೋದಿಯವರು ಒಂದು ದೊಡ್ಡ ನಿರ್ಧಾರ ಮಾಡಿದ್ದಾರೆ. ಇದು ತುಂಬಾ ಒಳ್ಳೆಯದು. ಮೋದಿಯವರ ಈ ಕಾರ್ಯವನ್ನ ನಾನು ಸ್ವಾಗತಿಸುತ್ತೇನೆ. ಕೆಲವರು ಮೋದಿ ಕಾಶ್ಮೀರಿಗರ ಅಭಿಪ್ರಾಯ ಪಡೆಯದೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ. ಅಂದು ನೆಹರು ಮಾಡಿದ್ದು ಸರಿ ಎಂದರೇ ಇದು ಕೂಡ ಸರಿ. ಅಂದು ಹೈದರಾಬಾದ್ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಅದೇ ರೀತಿಯ ಕೆಲಸವನ್ನ ಮಾಡಿದ್ದಾರೆ ಅಷ್ಟೇ ಎಂದು ಶ್ಲಾಘಿಸಿದರು.
Key words: 14 lakhs – Udupi Math-pejavara Shri- appeals – helping – neighbors -victims.