ಬೆಂಗಳೂರು,ಮಾ,20,2020(www.justkannada.in): ಕರ್ನಾಟಕದಲ್ಲಿ ಈಗ ಒಟ್ಟು 15 ಮಂದಿ ಕೊರೋನಾ ಸೋಂಕಿತರು ಇದ್ದಾರೆ. ಕೊರೋನಾ ಸೋಂಕಿದ್ದ ಐವರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶ್ರೀರಾಮುಲು, ಇದೂವರೆಗೆ 1,2253 ವ್ಯಕ್ತಿಗಳನ್ನ ಕರ್ನಾಟಕದಲ್ಲಿ ತಪಾಸಣೆ ಮಾಡಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 86,231 ಜನರ ತಪಾಸಣೆ ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 30,606 ಜನರ ತಪಾಸಣೆ ಮಾಡಲಾಗಿದೆ. ಕಾರವಾರ ಹಾಗೂ ಮಂಗಳೂರು ಬಂದರುಗಳಲ್ಲಿ 5,695 ಜನ ತಪಾಸಣೆ ನಡೆಸಲಾಗಿದೆ. ಕರ್ನಾಟಕದಲ್ಲಿ ಈಗ ಒಟ್ಟು 15 ಮಂದಿ ಕೊರೋನಾ ಸೋಂಕಿತರು ಇದ್ದಾರೆ. ಬೆಂಗಳೂರಿನಲ್ಲಿ 13 ಜನ, ಕಲಬುರ್ಗಿಯಲ್ಲಿ 3 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ., ಮಡಿಕೇರಿಯಲ್ಲಿ ಒಬ್ಬರು. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದ ಒಟ್ಟು 5 Positive ಬಂದ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಇಬ್ಬರು ಇವತ್ತು Discharge ಆಗ್ತಾ ಇದ್ದಾರೆ ಎಂದು ತಿಳಿಸಿದರು.
ಒಟ್ಟು ಇಲ್ಲಿಯ ವರೆಗೆ 1143 ಜನರ ರಕ್ತ ಹಾಗೂ ಕಫ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 915 ಜನರ ವರದಿ ಬಂದಿದ್ದು ಎಲ್ಲವೂ Negative ಬಂದಿವೆ. ಉಳಿದ ಪರೀಕ್ಷಾ ವರದಿಗಳು ಬರಬೇಕಿದೆ. ಸುಮಾರು 2280 ಜನರನ್ನ Home Quarantine ನಲ್ಲಿ ಇಡಲಾಗಿದೆ. ಸುಮಾರು 97 ಜನರನ್ನ Hospital Quarantine ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ ಭಯಾನಕ ಖಾಯಿಲೆ ಅಲ್ಲ. ಯಾರೂ ಗಾಬರಿ ಪಡುವುದು ಬೇಡ. ನಿನ್ನೆ ಒಂದೇ ದಿನ 3000 ಜನ ಮತ್ತೆ ತಾವಾಗಿಯೇ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದಾರೆ ಎಂದು ಸಚಿವ ಶ್ರೀರಾಮುಲು ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 22 ರಂದು ಜನತಾ ಕರ್ಫ್ಯೂ ಕರೆ ನೀಡಿದ್ದಾರೆ. ಅಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಯಾರೂ ಹೊರಗೆ ಬಾರದ ರೀತಿಯಲ್ಲಿ ಪ್ರಧಾನಿ ಸೂಚನೆ ನೀಡಿದ್ದಾರೆ. ಪ್ರಧಾನಿ ಕರೆಗೆ ನಾವೆಲ್ಲ ಒಟ್ಟುಗೂಡಿ ಕೈ ಜೋಡಿಸಿ ಸ್ಪಂದಿಸೋಣ. ಈಗಾಗಲೇ 15 ದಿನ ನಮ್ಮ ರಾಜ್ಯ ಸರ್ಕಾರ ಮಾಲ್, ಸಿನಿಮಾ ಮಂದಿರ, ಸಾರ್ವಜನಿಕ ಸ್ಥಳಗಳನ್ನ ನಿರ್ಬಂಧಿಸಲಾಗಿದೆ. ಸರ್ಕಾರದ ನಿಯಮಗಳನ್ನ ರಾಜ್ಯದ ಜನ ಪಾಲಿಸಬೇಕು. ಜನತೆಯ ಸಹಕಾರ ಇಲ್ಲದೆ ಸರ್ಕಾರ ಏನೂ ಮಾಡೋಕೆ ಆಗೊಲ್ಲ. ರಾಜ್ಯದ ಜನ ಆತಂಕಪಡುವ ಅಗತ್ಯವಿಲ್ಲ, ನಿಮ್ಮ ಜೊತೆಗೆ ನಾನಿದ್ದೇನೆ. ನಮ್ಮ ಸರ್ಕಾರ, ಮುಖ್ಯಮಂತ್ರಿಗಳು ಇದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳನ್ನೂ ಬಂದ್ ಮಾಡಿದ್ದೇವೆ. ಬೇರೆ ರಾಜ್ಯಗಳಿಂದ ಬರುವವರನ್ನೂ ಕೂಡ Home Quarantine ಮಾಡಲಾಗುತ್ತಿದೆ. ಸಾರ್ವಜನಿಕರು ದಯಮಾಡಿ ಸ್ವಚ್ಛತೆ ಕಾಪಾಡಿ ಎಂದು ಸಲಹೆ ನೀಡಿದರು.
ವಿಕ್ಟೋರಿಯಾ 2000 ಬೆಡ್ ಹೊಂದಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ 400, ಜಯನಗರ ಆಸ್ಪತ್ರೆ 400, ಕಿಮ್ಸ್ ಆಸ್ಪತ್ರೆಯಲ್ಲಿ 1000 ಬೆಡ್ ಸಿಗುತ್ತೆ. ಈ ಆಸ್ಪತ್ರೆಗಳನ್ನು ಸಂಪೂರ್ಣ ಕೋರೋನಾ ವೈರಸ್ ಚಿಕಿತ್ಸೆಗೆ ಇಡಲು ಸಲಹೆ ಬಂದಿವೆ. ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಕೋರೋನಾ ಗೆ ವಿಶೇಷ ಆಸ್ಪತ್ರೆ ಬೇಕು ಎಂಬುದು ಹಲವರ ವಾದ ಹೀಗಾಗಿ ಟಾಸ್ಕ್ ಫೋರ್ಸ್ ಕಮಿಟಿಸಭೆಯಲ್ಲಿ ಚರ್ಚೆ ಮಾಡ್ತೀನಿ. ಎಷ್ಟೇ positive ಕೇಸ್ ಬಂದ್ರೂ ನಾವು ಎದುರಿಸಲು ಸಿದ್ಧವಾಗಬೇಕಿದೆ. ಹಾಗಾಗಿ ನಾನು ಇವತ್ತು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಡ್ತೀನಿ. ಇದು ಮುಂದಾಲೋಚನೆಗಾಗಿ ಈ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವರಾದ ಶ್ರೀ ಬಿ.ಶ್ರೀರಾಮುಲು ಹೇಳಿದರು.
Key words: 15 people – state – infected – corona- Health Minister-Sriramulu