ಮಾ.31ರಿಂದ 15 ವರ್ಷದ ಹಳೆಯ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಹಾಕಲ್ಲ

ನವದೆಹಲಿ,ಮಾರ್ಚ್,1,2025 (www.justkannada.in): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ  ಹೆಚ್ಚುತ್ತಿರುವ ಮಾಲಿನ್ಯವನ್ನು ನಿಭಾಯಿಸಲು ದೆಹಲಿ ಸರ್ಕಾರ  ಮಹತ್ವದ ನಿರ್ಧಾರವನ್ನು  ಕೈಗೊಂಡಿದೆ.

ಮಾರ್ಚ್ 31ರಿಂದ 15 ವರ್ಷದ ಹಳೆಯ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಹಾಕದರಿಲು ನಿರ್ಧರಿಸಿದೆ.  ದೆಹಲಿಯ ಪರಿಸರ ಇಲಾಖೆ ಈ ಬಗ್ಗೆ ತೀರ್ಮಾನಿಸಿದ್ದು, ಇದೇ ಮಾರ್ಚ್ 31ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

ಈ ಕುರಿತು ಮಾತನಾಡಿರುವ ದೆಹಲಿ ಪರಿಸರ ಇಲಾಖೆ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ,   ಮಾರ್ಚ್ 31ರ ನಂತರ ದೆಹಲಿಯ ಯಾವುದೇ ಪೆಟ್ರೋಲ್ ಪಂಪ್‌ ನಲ್ಲಿ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳಿಗೆ ಪೆಟ್ರೋಲ್ ನೀಡುವುದಿಲ್ಲ. ವಾಹನಗಳ ಹೊಗೆ ಮತ್ತು ಮಾಲಿನ್ಯವನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ .

ದೆಹಲಿ ಸರ್ಕಾರ ಹಳೆಯ ವಾಹನಗಳನ್ನು ಗುರುತಿಸಲು ಸ್ಮಾರ್ಟ್ ಗ್ಯಾಜೆಟ್‌ ಗಳನ್ನು ಬಳಸಲು ನಿರ್ಧರಿಸಿದೆ. ಈ ಗ್ಯಾಜೆಟ್‌ ಗಳ ಸಹಾಯದಿಂದ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಪೆಟ್ರೋಲ್ ಪಂಪ್‌ ಗಳಲ್ಲಿ ಗುರುತಿಸಲಾಗುತ್ತದೆ ಮತ್ತು ಅವುಗಳಿಗೆ ಇಂಧನ ನೀಡಲಾಗುವುದಿಲ್ಲ. ಇಡೀ ಪ್ರಕ್ರಿಯೆಯನ್ನು ಸುಗಮವಾಗಿ ಕಾರ್ಯಗತಗೊಳಿಸಲು ಈ ನಿರ್ಧಾರದ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ತಿಳಿಸಲಾಗುವುದು ಎಂದು ಸಿರ್ಸಾ  ತಿಳಿಸಿದ್ದಾರೆ.

Key words: Petrol, diesel,  not, 15 years, old vehicles