ಮೈಸೂರು,ಸೆಪ್ಟೆಂಬರ್,26,2020(www.justkannada.in) : ನಕಲಿ ಯುನಿವರ್ಸಿಟಿ ಹೆಸರಿನ ಕಾರ್ಯಕ್ರಮದ ಮೇಲೆ ದಾಳಿ ಮಾಡಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ಹಾಗೂ ವಿವಿಧ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಕಲಿ ಯುನಿವರ್ಸಿಟಿ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ತಮಿಳುನಾಡು ಮೂಲದ ನಂಬಿಯಾರ್ ಹಾಗೂ ಶ್ರೀನಿವಾಸ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹರಿಹರ ಶಾಸಕ ರಾಮಪ್ಪ ಅವರಿಗೆ ನಕಲಿ ಯುನಿವರ್ಸಿಟಿಯ ಪ್ರಶಸ್ತಿ ಪಡೆಯದಂತೆ ಮನವೊಲಿಸಲಾಯಿತು ಎಂದರು.
ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಹೆಸರಿನ ನಕಲಿ ಯುನಿವರ್ಸಿಟಿಯಾಗಿದ್ದು, ಕಳೆದ ಎಂಟು ವರ್ಷದಿಂದ ಇದೇ ರೀತಿ ಪ್ರಶಸ್ತಿ ನೀಡುತ್ತಿದೆ, ಒಂದು ಪ್ರಶಸ್ತಿಗೆ 15 ಸಾವಿರದಿಂದ 1 ಲಕ್ಷದ ಹಣಕೊಟ್ಟು ಪ್ರಶಸ್ತಿ ಪಡೆಯಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಪ್ರಕರಣ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
key words : 150 Fake-Doctorate-Certificate-Fake-University-Program-DCP Prakash Gowda