ಬೆಂಗಳೂರು, ಸೆಪ್ಟೆಂಬರ್ 27, 2023 (www.justkannada.in): ಬೆಂಗಳೂರು ಬಂದ್ ನಿಂದ 1500 ಕೋಟಿ ರೂಪಾಯಿಯಷ್ಟು ವಹಿವಾಟು ಸ್ಥಗಿತಗೊಂಡಿದೆ.
ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರು ಬಂದ್ ಕರೆ ನೀಡಲಾಗಿತ್ತು. 1500 ಕೋಟಿ ರೂಪಾಯಿಯಷ್ಟು ವಹಿವಾಟು ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ.ನಷ್ಟು ಜಿ.ಎಸ್.ಟಿ. ನಷ್ಟವಾಗಿದೆ.
ಬೆಂಗಳೂರು ಬಂದ್ ನಿಂದ ವಾಣಿಜ್ಯ ಚಟುವಟಿಕೆ, ಕೈಗಾರಿಕೆ ಉತ್ಪಾದನೆ ಬಹುತೇಕ ಸ್ಥಗಿತಗೊಳ್ಳುತ್ತವೆ. ಇದರಿಂದಾಗಿ 1500 ಕೋಟಿಗೂ ಹೆಚ್ಚಿನ ವ್ಯಾಪಾರ ವಹಿವಾಟು ಸ್ಥಗಿತವಾಗಿ ಸರ್ಕಾರಕ್ಕೆ 250 ಕೋಟಿ ರೂ ನಷ್ಟು ನಷ್ಟವಾಗಿದೆ ಎಂಬ ಮಾಹಿತಿ ಇದೆ.
ರಾಜ್ಯದ ಆದಾಯದ ಪಾಲಿನಲ್ಲಿ ಬೆಂಗಳೂರಿನ ಪಾಲು ಶೇಕಡ 60ರಷ್ಟು ಆಗಿರುತ್ತದೆ. ಒಂದು ದಿನದ ಬಂದ್ ನಿಂದಾಗಿ ರಾಜ್ಯದಲ್ಲಿ ಸುಮಾರು 4500 ಕೋಟಿ ರೂ.ಗೂ ಅಧಿಕ ವಹಿವಾಟು ಸ್ಥಗಿತಗೊಳ್ಳಲಿದ್ದು, ರಾಜ್ಯ ಸರ್ಕಾರಕ್ಕೆ ಸುಮಾರು 450 ಕೋಟಿ ರೂ. ಹೆಚ್ಚು ನಷ್ಟ ಉಂಟಾಗಲಿದೆ ಎನ್ನಲಾಗಿದೆ.