ಮೈಸೂರು,ಮೇ,20,2021(www.justkannada.in): ನಿಯಮ ಉಲ್ಲಂಘನೆ, ಹಣ ವಸೂಲಿ ಆರೋಪದ ಮೇಲೆ ಮೈಸೂರಿನಲ್ಲಿ 16 ಕೋವಿಡ್ ಕೇರ್ ಸೆಂಟರ್ ಗಳನ್ನ ಬಂದ್ ಮಾಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ್ಧ ಶಾಸಕ ಸಾ.ರಾ ಮಹೇಶ್ ಗೆ ಶಾಸಕ ಎಸ್.ಎ ರಾಮದಾಸ್ ತಿರುಗೇಟು ನೀಡಿದ್ದಾರೆ.
ರಾಮದಾಸ್ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲದ ವಿಚಾರದಲ್ಲಿ ನಿರ್ಣಯ ಕೈಗೊಂಡಿದ್ದಾರೆ ಎಂಬ ಶಾಸಕ ಸಾ.ರಾ ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಎಸ್.ಎ ರಾಮದಾಸ್, ಸಚಿವರು ಸೂಚನೆ ನೀಡಿದ ಕಾರಣಕ್ಕೆ ನಾನು ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಇದು ನನಗೆ ಬಂದ ಅಧಿಕಾರ ಅಲ್ಲ, ನನ್ನ ಜಿಲ್ಲೆಯ ಕರ್ತವ್ಯ. ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟೇ ಹೇಳಿದ್ರು ಅದನ್ನ ಮುಂದುವರೆಸಿದ್ದವು. ಈ ಬಗ್ಗೆ ನಾನು ಮಾಹಿತಿಯನ್ನ ತರಿಸಿಕೊಂಡಿದ್ದೆ. ಜೊತೆಗೆ ವಾರ್ ರೂಂನಲ್ಲಿನ ಲೆಕ್ಕವು ಸರಿಯಾಗಿ ಟ್ಯಾಲಿ ಆಗುತ್ತಿರಲಿಲ್ಲ. ಎಲ್ಲವು ಡಬಲ್ ಡಬಲ್ ಇತ್ತು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದೆ.
ಒಂದು ವಾರದ ಹಿಂದೆಯೇ ಈ ಬಗ್ಗೆ ಸೂಚಿಸಲಾಗಿತ್ತು. ಇದನ್ನ ಗಮನಿಸಿ ಖುದ್ದು ನಾನೇ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಒಳಗೊದೆ. ಇಲ್ಲಿ ಸಾಕಷ್ಟು ಲೋಪದೋಷ ಕಂಡು ಬಂತು. ಕೂಡಲೇ ಇದನ್ನ ವಿಡಿಯೋ ಮಾಡಿ ಈ ಕುರಿತು ಸಭೆ ಮಾಡಿದೆವು. ಆಸ್ಪತ್ರೆಯಿಂದ ಬಂದ ಕೆಲವೇ ಕ್ಷಣದಲ್ಲಿ ಕರೆ ಬಂತು. ಎಲ್ಲರೂ ಬಳಿಕ ಸರಿಯಾದ ಮಾಹಿತಿ ಕೊಟ್ಟರು. ಬಡ ಜನರಿಗೆ ಸರಿಯಾದ ಚಿಕಿತ್ಸೆ ಸಿಗುವುದು. ಅದು ಸರ್ಕಾರಿ ಕೋಟಾದ ದುರ್ಬಳಕೆ ಆಗಬಾರದೆಂಬುದು ನಮ್ಮ ಉದ್ದೇಶವಾಗಿದೆ ಎಂದು ಶಾಸಕ ರಾಮದಾಸ್ ಹೇಳಿದರು.
ಕೋವಿಡ್ ಕೇರ್ ಸೆಂಟರ್ ಬಂದ್ ಮಾಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಶಾಸಕ ಸಾ.ರಾ ಮಹೇಸ್, ಎಸ್.ಎ ರಾಮದಾಸ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು. ಅವರೇ ಈ ರೀತಿ ಆದೇಶ ಮಾಡಿದರೇ ಹೇಗೆ. ಕೋವಿಡ್ ಕೇರ್ ಸೆಂಟರ್ ಗೆ ಶಾಸಕ ರಾಮದಾಸ್ ಹೋದಾಗ ಒಂದೆರೆಡರಲ್ಲಿ ಅವ್ಯವಸ್ಥೆ ಇರಬಹುದು. ಎಸ್.ಎ ರಾಮದಾಸ್ ಒಂದು ಕ್ಷೇತ್ರದ ಶಾಸಕರು. ಅವರು ಹೇಗೆ ಇಡೀ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ ಅನ್ನು ಬಂದ್ ಮಾಢಿಸುತ್ತಾರೆ. ರಾಮದಾಸ್ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲದ ವಿಚಾರದಲ್ಲಿ ನಿರ್ಣಯ ಕೈಗೊಂಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು.
Key words: 16 covid Care Center –Bandh- Mysore –MLA-SA Ramdas -statement –SARA Mahesh.