ಇಂಧೋರ್:ಮೇ-31:(www.justkannada.in) ಆನ್ ಲೈನ್ ಅನ ಅಪಾಯಕಾರಿ ಗೇಮ್ ಗಳ ಬಗ್ಗೆ ಎಷ್ಟೇ ಎಚ್ಚರಿಕೆ ನಿಡಿದರೂ ಅದಕ್ಕೆ ಬಲಿಯಾಗುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಪಾಯಕಾರಿ ಪಬ್ ಜಿ ಗೇಮ್ ಗೆ 16 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.
ರಾಜಸ್ಥಾನದ ನಸೀರಾಬಾದ್ ನಿವಾಸಿಯಾಗಿರುವ ಪಿಯು ವಿದ್ಯಾರ್ಥಿಯೊಬ್ಬ ತನ್ನ ಸ್ಮಾರ್ಟ್ ಫೋನ್ನಲ್ಲಿ ಸತತ ಆರು ಗಂಟೆವರೆಗೆ ಪಬ್ಜಿ ಗೇಮ್ ಆಡಿದ ಪರಿಣಾಮ ಸಾವಿಗೀಡಾಗಿದ್ದಾನೆ. ಮಧ್ಯಪ್ರದೇಶ ನೀಮುಚ್ ಜಿಲ್ಲೆಯ ತನ್ನ ಸಂಬಂಧಿಕರ ಮನೆಯಲ್ಲಿ ಮೇ 26ರ ಸಂಜೆ ಈ ಘಟನೆ ನಡೆದಿದೆ. ಫರ್ಕಾನ್ ಖುರೇಷಿ(16) ಮೃತ ಬಾಲಕ. ಈತ ನಸೀರಬಾದ್ನ ಕೇಂದ್ರೀಯ ವಿದ್ಯಾಲಯ ಪಿಯು ವಿದ್ಯಾರ್ಥಿ.
ಸೋದರ ಸಂಬಂಧಿಯ ವಿವಾಹ ಕಾರ್ಯಕ್ಕೆ ಬಂದ ಫರ್ಕಾನ್ ಹಾಗೂ ಆತಮನ ಕುಟುಂಬ ಮದುವೆ ತಯಾರಿಯಲ್ಲಿ ನಿರತರಾಗಿದ್ದರು. ಈನಡುವೆ ಪಬ್ಜಿ ಗೇಮ್ ಆಡುತ್ತಿದ್ದ ಫರ್ಕಾನ್ಗೆ ಅನೇಕ ಬಾರಿ ಎಚ್ಚರಿಕೆಯನ್ನು ನೀಡಿದರೂ, ಅದನ್ನು ಲೆಕ್ಕಿಸದೇ ರಾತ್ರಿಯೆಲ್ಲ ಗೇಮ್ ಆಡಿದ್ದಾನೆ. ಅಲ್ಲದೇ, ಮರುದಿನ ಮಧ್ಯಾಹ್ನ 12.30ಕ್ಕೆ ಗೇಮ್ ಆಡಲು ಆರಂಭಿಸಿದ ಫರ್ಕಾನ್ ಯಾವುದೇ ವಿರಾಮವಿಲ್ಲದೇ ಸಂಜೆ 6.30ರವರೆಗೂ ಆಡಿದ್ದ ಎಂದು ತಂದೆ ಹರೂನ್ ರಶೀದ್ ಖುರೇಷಿ ತಿಳಿಸಿದ್ದಾರೆ.
ಗೇಮ್ ಆಡುವಾಗ ಫರ್ಕಾನ್ ಜತೆ ಕೊಠಡಿಯಲ್ಲಿ ಆತನ ತಂಗಿ ಫಿಜಾ ಕೂಡ ಇದ್ದಳು. ಇದ್ದಕ್ಕಿದ್ದಂತೆ ಫರ್ಕಾನ್ ಬ್ಲ್ಯಾಸ್ಟ್ ಇಟ್, ಬ್ಲ್ಯಾಸ್ಟ್ ಇಟ್ ಎಂದು ಕೂಗತೊಡಗಿದ್ದಾನೆ ಅಲ್ಲದೇ ಅಯಾನ್ ನೀವು ನನ್ನನ್ನು ಗೇಮ್ ಮತ್ತು ಜೀವನದಲ್ಲಿ ಸೋಲುವಂತೆ ಮಾಡಿದರೆ, ನಾನು ನಿಮ್ಮೊಂದಿಗೆ ಮತ್ತೆ ಗೇಮ್ ಆಡುವುದಿಲ್ಲ ಎಂದು ಹೇಳುತ್ತಿದ್ದ. ಇದೇ ವೇಳೆ ತಲೆನೋವುತ್ತಿದೆ ಎಂದು ಹೇಳುತ್ತಲೇ ಫರ್ಕಾನ್ ಕೆಳಗೆ ಕುಸಿದು ಬಿದ್ದಿದ್ದಾನೆ.
ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದ ಫರ್ಕಾನ್ನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ, ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಗೇಮ್ನಲ್ಲಿ ತೀವ್ರವಾಗಿ ಮುಳುಗಿದ್ದ ಫರ್ಕಾನ್ ಸೋಲಿನ ಹತಾಶೆಯಿಂದ ಭಾವೋದ್ವೇಗದಿಂದ ಹೃದಾಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಪಬ್ ಜಿ ಗೇಮ್ ಹುಚ್ಚು: ನಿರಂತರ 6 ಗಂಟೆಗಳ ಕಾಲ ಆಡಿದ 16 ವರ್ಷದ ಬಾಲಕ ಧಾರುಣ ಸಾವು
16-year-old dies after playing PUBG for 6 hours
16-year-old boy died of cardiac arrest after playing PUBG game on his mobile for six hours in a stretch in Neemuch town of Madhya Pradesh.