ಬೆಂಗಳೂರು, ಮೇ 06, 2020 (www.justkannada.in): ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, 1610 ಕೋಟಿ ರೂ. ವಿಶೇಷ ಪ್ಯಾಕೇಜ್ ಅನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಘೋಷಿಸಿರುವ ಪ್ರಮುಖ ಪ್ಯಾಕೇಜ್ ಗಳಿವು…
ಹೂವು ಬೆಳೆಗಾರರಿಗೆ ಹೆಕ್ಟೇರ್ ಗೆ ಸೀಮಿತವಾಗಿ ೨೫ ಸಾವಿರ ರೂ ಪರಿಹಾರ. ೧೧,೬೮೭ ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆಯಲಾಗಿದೆ.
ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿದ ಸರ್ಕಾರ. ೧೬೧೦ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ.
ರಾಜ್ಯದಲ್ಲಿರುವ ೭ ಲಕ್ಷದ ೭೫ ಸಾವಿರ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ೫ ಸಾವಿರ ರೂ ಪರಿಹಾರ ನೀಡಲಾಗುವುದು.
ಅಗಸರು ಹಾಗೂ ಕ್ಷೌರಿಕರಿಗೆ ತಲಾ ೫ ಸಾವಿರ ರೂ ಪರಿಹಾರ ನೀಡಲಾಗುವುದು. ಇದರಿಂದ ಸುಮಾರು ೬೦ ಸಾವಿರ ಅಗಸರು ಹಾಗೂ ೨ ಲಕ್ಷದ ೩೦ ಸಾವಿರ ಕ್ಷೌರಿಕ ಸಮುದಾಯದವರಿಗೆ ಈ ನೆರವು ದೊರೆಯಲಿದೆ.
ತರಕಾರಿ ಹಾಗೂ ಹಣ್ಣು ಬೆಳೆಗಾರರು ಸಂಕಷ್ಟದಲ್ಲಿದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಲಾಗುವುದು.