ಬೆಂಗಳೂರು,ಸೆಪ್ಟೆಂಬರ್,21,2020(www.justkannda.in) : ಈಗಾಗಲೇ ಅಧಿವೇಶನದಲ್ಲಿ ಚರ್ಚೆಗೆ 1670 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದ್ದು, ಅಧಿವೇಶನ ಮೊಟಕುಗೊಳಿಸುವುದಕ್ಕೆ ಬಿಡುವುದಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ಉತ್ತರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸುವ ಸಂಬಂಧ ಸರಕಾರವು ಮನವಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅದರ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರದ ಭ್ರಷ್ಟಚಾರ ಜನರಿಗೆ ತಿಳಿಯಬೇಕು
ಕೊರೊನಾ ಇದ್ದೇ ಇದೆ. ಅದರಿಂದ ಆಚೆ ಬರಬೇಕಿದೆ. ಹೀಗಾಗಿ, ಯಾವುದೇ ಕಾರಣಕ್ಕು ಅಧಿವೇಶನ ಮೊಟಕುಗೊಳಿಸಬಾರದು. ಸಚಿವರು, ಅಧಿಕಾರಿಗಳ ಬದಲಾವಣೆಯಿಂದ ಸರಕಾರವು ಭ್ರಷ್ಟಚಾರ ಮಾಡಿದ್ದು, ಸರಕಾರದ ಭ್ರಷ್ಟಾಚಾರ ಜನರಿಗೆ ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.
ಧೈರ್ಯವಿದ್ದರೆ ಮುಚ್ಕೊಂಡು ಸದನ ನಡೆಸಲಿ
ಸರ್ಕಾರಕ್ಕೆ ಯಾಕೆ ಹೆದರಿ ಓಡಿ ಹೋಗಬೇಕು. ತಪ್ಪು ಮಾಡಿಲ್ಲ ಎಂದಾದರೆ, ಧೈರ್ಯವಿದ್ದರೆ ಮುಚ್ಕೊಂಡು ಸದನ ನಡೆಸಲಿ. ವಿಧಾನಸಭೆ ಮೊಟಕುಗೊಳಿಸುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
30 ವಿಧೇಯಕಗಳ ಮೇಲೆ ಚರ್ಚೆಯಾಗಬೇಕು
ಈಗಾಗಲೇ ಘೋಷಿಸಿರುವ 30 ವಿಧೇಯಕಗಳ ಮೇಲೆ ಚರ್ಚೆಯಾಗಬೇಕಿದೆ. ಒಂದೊಂದು ವಿಧೇಯಕ ಚರ್ಚೆಗೂ ಕನಿಷ್ಠ 2 ಗಂಟೆ ಸಮಯ ಬೇಕಿದೆ. ಈ ಎಲ್ಲಾ ವಿಧೇಯಕಗಳ ಕುರಿತು ಸಮಗ್ರವಾಗಿ ಚರ್ಚೆಯಾಗಬೇಕಿದೆ. ಅದಲ್ಲದೇ, ಸರಕಾರದ ಮೇಲೆ ಭ್ರಷ್ಟಚಾರ ಆರೋಪವಿದ್ದು, ಈ ಕುರಿತು ಸರ್ಕಾರವು ಸ್ಪಷ್ಟನೆ ನೀಡಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
key words : 1670 questions-prepared-let-government-answer-bold-D.k.shivakumar Sawal