ಸಿಎಂ ಸಿದ್ದರಾಮಯ್ಯ : ದಾಖಲೆಯ 16 ನೇ ಬಜೆಟ್ ಮಂಡನೆಗೆ ಕ್ಷಣಗಣನೆ.

Cm Siddaramaiah: Countdown for record 16th budget presentation.

 

ಬೆಂಗಳೂರು, ಮಾ.೦೭,೨೦೨೫: ಇಂದು ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್. 2025-26 ನೇ ಸಾಲಿನ ಬಜೆಟ್ ಮಂಡನೆ. ಸಿಎಂ ಸಿದ್ದರಾಮಯ್ಯರ ದಾಖಲೆಯ 16 ನೇ ಬಜೆಟ್ ಮಂಡನೆಗೆ ಕ್ಷಣಗಣನೆ. ಬೆಳಗ್ಗೆ ೧೦.೧೫ ಕ್ಕೆ ಬಜೆಟ್‌ ಮಂಡಿಸಲಿರುವ ಸಿದ್ದರಾಮಯ್ಯ.

ಗ್ಯಾರಂಟಿ ಯೋಜನೆಗಳ ನಡುವೆಯೂ ಅಭಿವೃದ್ಧಿ ಕಡೆ ಗಮನ. ಕಳೆದ ಸಾಲಿನ ಬಜೆಟ್ 3.71 ಲಕ್ಷ ಕೋಟಿ. ಈ ಬಾರಿ 4 ಲಕ್ಷ ಕೋಟಿ ಮೀರುವ ಅಂದಾಜು. ಸಿಎಂ ಸಿದ್ದರಾಮಯ್ಯ ಗೆ ಸವಾಲಾದ ಸಮತೋಲನ ಬಜೆಟ್. ಒಂದೆಡೆ ಪಂಚ ಗ್ಯಾರಂಟಿ,ಮತ್ತೊಂದೆಡೆ ಅಭಿವೃದ್ಧಿ ಸವಾಲು.

ರಾಜಸ್ವ ಕೊರತೆ ಪ್ರಮಾಣ ತಗ್ಗಿಸುವ ನಿರೀಕ್ಷೆ. ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ಸಾಧ್ಯತೆ. ಇನ್ವೇಸ್ಟ್ ಕರ್ನಾಟಕ 2025 ಜಾಗತೀಕ ಹೂಡಿಕದಾರರಿಂದ ಸುಮಾರು 10.27 ಲಕ್ಷ ಕೋಟಿ ಹೂಡಿಕೆ. ಸುಮಾರು 6 ಲಕ್ಷ ಉದ್ಯೋಗ ಸೃಷ್ಟಿ ಭರವಸೆ.

ಈ ಬಾರಿಯ ರಾಜ್ಯದ ಆದಾಯ 3,20,000 ಕೋಟಿ ಅಂದಾಜು. ಸಾಲ 1.5 ಲಕ್ಷ ಕೋಟಿಗೂ ಹೆಚ್ಚಾಗುವ ಸಾಧ್ಯತೆ. ಪಂಚ ಗ್ಯಾರಂಟಿಗಳಿಗಾಗಿ 52 ಸಾವಿರ ಕೋಟಿ ಕಳೆದ ವರ್ಷ ಮೀಸಲು. ಈ ವರ್ಷ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ. ಫಲಾನುಭವಿಗಳ ಸಂಖ್ಯೆ ಹೆಚ್ಚಳ ಸಂಭವ. ಹಾಗಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮತ್ತಷ್ಟು ಹಣ ಹೆಚ್ಚಳ ಸಾಧ್ಯತೆ.

KEY WORDS: Cm, Siddaramaiah, Countdown,16th budget,

Cm Siddaramaiah: Countdown for record 16th budget presentation.