ಬೆಂಗಳೂರು,ಜು,29,2019(www.justkannada.in): 17 ಮಂದಿ ಅತೃಪ್ತ ಶಾಸಕರನ್ನ ಅನರ್ಹಗೊಳಿಸಿ ನಿನ್ನೆ ಆದೇಶ ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ತಮಗೆ ಸ್ಥಾನ ನೀಡಿದವರಿಗೆ ಕೆ, ಆರ್ ರಮೇಶ್ ಕುಮಾರ್ ರಿಂದ ಋಣ ಸಂದಾಯವಾಗಿದೆ. ಸ್ಪೀಕರ್ ರಿಂದ ಈ ರೀತಿ ವರ್ತನೆ ನಿರೀಕ್ಷಿಸಿರಲಿಲ್ಲ. ಉತ್ತಮ ಸ್ಪೀಕರ್ ಎಂಬ ರೀತಿಯಲ್ಲಿ ಅವರು ವರ್ತಿಸಿಲ್ಲ. ಉತ್ತಮ ಸ್ಪೀಕರ್ ಎಂಬ ಹೆಸರು ಪಡೆದವರಿಂದ ಈ ನಿರ್ಧಾರ ನಿರೀಕ್ಷಿಸಿರಲಿಲ್ಲ. ಸದನದಲ್ಲಿ ಅವರ ನಡವಳಿಕೆಯೂ ಉತ್ತಮವಾಗಿರಲಿಲ್ಲ , ರಾಜ್ಯದ ಜನರು ರಮೇಶ್ ಕುಮಾರ್ ರನ್ನ ಕ್ಷಮಿಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾರೋ ಒತ್ತಡಕ್ಕೆ ಮಣಿದವರಂತೆ ರಮೇಶ್ ಕುಮಾರ್ ವರ್ತಿಸಿದ್ದಾರೆ. ರಾಜೀನಾಮೆ ನೀಡಿದ ಶಾಸಕರನ್ನ ಅನರ್ಹಗೊಳಿಸಿ ತಮಗೆ ಸ್ಪೀಕರ್ ಸ್ಥಾನ ನೀಡಿದ್ದಕ್ಕೆ ಋಣ ಸಂದಾಯ ಮಾಡಿದ್ದಾರೆ. ಅವರೇ ಹೇಳಿಕೊಂಡಂತೆ ಕ್ಷಣಕ್ಕೊಮ್ಮೆ ಬದಲಾಗುತ್ತಾರೆ. ಅತೃಪ್ತ ಶಾಸಕರ ವಿಚಾರದಲ್ಲೂ ಅದೇ ರೀತಿ ನಡೆದುಕೊಂಡಿದ್ದಾರೆ. ಸ್ಪೀಕರ್ ಕಾರ್ಯ ವೈಖರಿ ಬಗ್ಗೆಯೂ ನಾನು ಬರೆಯುವ ಪುಸ್ತಕದಲ್ಲಿ ಉಲ್ಲೇಖಿಸುವೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
Key words: 17 MLAs- disqualify -H. Vishwanath –outrage- Ramesh Kumar