ಮೈಸೂರು,ಡಿಸೆಂಬರ್,10,2020(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್ಒಯು) 2020-21 ನೇ ಶೈಕ್ಷಣಿಕ ಸಾಲಿಗೆ ವಿವಿಧ ದೂರ ಶಿಕ್ಷಣ ಕೋರ್ಸ್ ಗಳಿಗೆ ಪ್ರವೇಶ ಬಯಿಸಿ ದಾಖಲೆಯ 17,095 ಅರ್ಜಿಗಳು ಬಂದಿವೆ.
ಈ ವಿಶ್ವವಿದ್ಯಾಲಯವು ರಾಜ್ಯದ ಏಕೈಕ ದೂರ ಶಿಕ್ಷಣ ಕಲಿಕಾ ಕೇಂದ್ರವಾಗಿದ್ದು, ಇತ್ತೀಚೆಗೆ ಪರಿಚಯಿಸಲಾಗಿರುವ ಕೋರ್ಸ್ ಗಳನ್ನೂ ಒಳಗೊಂಡಂತೆ 31 ವಿವಿಧ ಯುಜಿ, ಪಿಜಿ, ಡಿಪ್ಲೊಮಾ ಹಾಗೂ ಸರ್ಟಿಫಿಕೆಟ್ ಕೋರ್ಸ್ ಗಳಿಗೆ ಪ್ರವೇಶ ಬಯಸಿ ಅರ್ಜಿಗಳು ಬಂದಿವೆ.
ಈ ಮಹತ್ತರವಾದ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡು ಯುಜಿಸಿ ದೂರ ಶಿಕ್ಷಣ ಮಂಡಳಿಯು, ಜುಲೈ ಆವೃತ್ತಿಯ ಪ್ರವೇಶಾತಿಗಳ ಅಂತಿಮ ದಿನಾಂಕವನ್ನು ಜನವರಿ 15, 2021 ರವರೆಗೂ ವಿಸ್ತರಿಸಿದೆ. ಕೋವಿಡ್ ಸರ್ವವ್ಯಾಪಿಯಿಂದಾಗಿ ಹಲವು ರೀತಿಯ ಅಡೆತಡೆಗಳನ್ನು ಎದುರಿಸಿದಂತಹ ಅನೇಕ ವಿದ್ಯಾರ್ಥಿಗಳಿಗೆ ಇದರಿಂದ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗಲಿದ್ದು, ಪ್ರವೇಶಾತಿ ಬಯಸಿ ಬರುವ ಅರ್ಜಿಗಳ ಸಂಖ್ಯೆ ಈ ಬಾರಿ 20,000 ಸಂಖ್ಯೆಯನ್ನು ದಾಟುವ ನಿರೀಕ್ಷೆಯಿದೆ.
ಯುಜಿಸಿ ವತಿಯಿಂದ ಎರಡು ವರ್ಷಗಳ ಹಿಂದೆ ಮಾನ್ಯತೆಯನ್ನು ಮರುಗಳಿಸಿದ ನಂತರ ಕೆಎಸ್ಒಯುಗೆ ಉತ್ತಮ ಪ್ರತಿಕ್ರಿಯೆ ದೊರೆತಿರಲಿಲ್ಲ. ಆದರೆ ಈಗ ಮತ್ತೊಮ್ಮೆ ವಿದ್ಯಾರ್ಥಿ ಸಮೂಹದ ಪೈಕಿ ಕೆಎಸ್ಒಯು ತನ್ನ ಜನಪ್ರಿಯತೆಯನ್ನು ಪುನಃ ಗಳಿಸುತ್ತಿದೆ. ಹಿಂದಿನ ವರ್ಷ, ಕೆಎಸ್ಒಯುಗೆ ತನ್ನ ಎಲ್ಲಾ 20 ಪ್ರಾದೇಶಿಕ ಕೇಂದ್ರಗಳ ಮೂಲಕ 12,000 ಅರ್ಜಿಗಳನ್ನು ಬಂದಿದ್ದವು. ಆದರೆ ಈ ವರ್ಷ ಅತೀ ಹೆಚ್ಚಿನ ಅರ್ಜಿಗಳು ಮೈಸೂರು ಕೇಂದ್ರಕ್ಕೆ (3,651) ಬಂದಿದೆ. ಧಾರವಾಡ ( 2099), ಬೆಂಗಳೂರು (1,975), ಹಾಗೂ ಕಲಬುರಗಿ ( 1625) ಇದರ ನಂತರದ ಸ್ಥಾನಗಳನ್ನು ಗಳಿಸಿದೆ.
ಕೈಗೆಟಕುವ ಶುಲ್ಕ ಅಥವಾ ಆನ್ಲೈನ್ ಕೋರ್ಸ್ ಗಳಿಂದ ಅಷ್ಟೇನೂ ತೃಪ್ತಿ ಗಳಿಸದೆ ಇರುವುದು ವಿದ್ಯಾರ್ಥಿಗಳು ದೂರ ಶಿಕ್ಷಣ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಅತಿ ಹೆಚ್ಚಿನ ಅರ್ಜಿಗಳು ಬರಲು ಕಾರಣ ಎನ್ನುವುದು ಹಲವಾರು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.
ಕೆಎಸ್ಒಯು ಕುಲಸಚಿವ ಲಿಂಗರಾಜು ಗಾಂಧಿ ಅವರ ಪ್ರಕಾರ, “ಕೆಎಎಸ್ ತರಬೇತಿ ಒಳಗೊಂಡಂತೆ ಕೆಎಸ್ಒಯು ತನ್ನ ಸಾಧನೆಗಳು ಹಾಗೂ ಉಪಕ್ರಮಗಳು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆ್ಯಪ್, ರೇಡಿಯೊ ಹಾಗೂ ಆನ್ಲೈನ್ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲು ಒಂದು ಪೋಸ್ಟರ್ ಅಭಿಯಾನವನ್ನು ಹಮ್ಮಿಕೊಂಡಿತ್ತು. ಬಹುಶಃ ಇದು ಅತೀ ಹೆಚ್ಚಿನ ಪ್ರವೇಶಾತಿಗಳಿಗೆ ಕಾರಣವಾಗಿದೆ.
ಯುಜಿಸಿ ದೂರ ಶಿಕ್ಷಣ ಮಂಡಳಿಯು ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಿರುವ ಕಾರಣದಿಂದಾಗಿ ಕೆಎಸ್ಒಯುಗೆ ಇನ್ನೂ ಹೆಚ್ಚಿನ ಅರ್ಜಿಗಳು ಬರುವ ವಿಶ್ವಾಸವಿದೆ.
ವಿದ್ಯಾರ್ಥಿಗಳು ಮುಕ್ತಗಂಗೋತ್ರಿ ಕ್ಯಾಂಪಸ್ಗೆ ಭೇಟಿ ನೀಡಿ ಅಥವಾ ಬೆಂಗಳೂರು, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಹಾಸನ, ಕಲಬುರಗಿ, ಕಾರವಾರ, ಕೋಲಾರ ಒಳಗೊಂಡAತೆ 20 ಪ್ರಾದೇಶಿಕ ಕೇಂದ್ರಗಳ ಪೈಕಿ ಯಾವುದಾದರೂ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಪ್ರವೇಶಾತಿ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಬಹುದಾಗಿದೆ.
English summary…
KSOU receives record 17k applications
Mysuru, Dec. 10, 2020 (www.justkannada.in): The Karnataka State Open University (KSOU) has received a record number of 17,095 applications from candidates seeking various distance education courses for the year 2020-21.
KSOU is the only distance education center in the State, which has received so many applications from candidates seeking 31 different UG, PG, Diploma, and Certificate courses, including the recently started ones.
Inspired by the overwhelming response, the UGC Distance Education Bureau has extended the last date of receiving applications for admissions till January 15, 2021. It has helped many students who were facing several problems in applying due to the ongoing COVID-19 pandemic. As a result of this extension, the number of applications seeking admission for distance education courses are expected to exceed 20,000.
Last year KSOU had received only 12,000 applications from all the 20 centers across the State.
Students can complete the admission process by visiting the Muktagangotri campus in Mysuru or any of the 20 centers located at Bengaluru, Ballari, Chamarajanagara, Chikkamagaluru, Davangere, Dharwad, Hassan, Kalaburagi, Karwar, and Kolar.
Keywords: KSOU/ record applications/
Key words: 17,000 -applications – KSU – admission – distance learning courses.