ಮೈಸೂರು,ಫೆಬ್ರವರಿ,24,2021(www.justkannada.in) : ಸೈಕ್ಲಿಂಗ್ ಮೈಸೂರು ತರಬೇತಿ ಕೇಂದ್ರದ ಸೈಕ್ಲಿಂಗ್ ಕ್ರೀಡಾ ಪಟುಗಳು ಗದಗ್ ಜಿಲ್ಲೆಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ನಡೆದ 17ನೇ ರಾಷ್ಟ್ರೀಯ ಮೌಂಟನ್ ಬೈಕ್ ಚಾಂಪಿಯನ್ ಶಿಪ್ 2020-21ರಲ್ಲಿ ಭಾಗವಹಿಸಿ ಚಿನ್ನದ ಪದಕಗಳಿಸಿದ್ದಾರೆ ಎಂದು ತರಬೇತಿ ಕೇಂದ್ರದ ಸಂಸ್ಥಾಪಕ ಟಿ.ವಿ.ನಾಗರಾಜ್ ಹೇಳಿದರು.ಮೈಸೂರು ಪತ್ರಕರ್ತರ ಸಂಘದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳ ಶ್ರಮ, ನಮ್ಮ ಕರ್ನಾಟಕ ರಾಜ್ಯಕ್ಕೆ ಶೇ.75ರಷ್ಟು ಅಂಕಗಳನ್ನು ಪಡೆದು ರಾಜ್ಯಕ್ಕೆ 3ನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆಯಲು ಕಾರಣಕರ್ತರಾಗಿದ್ದಾರೆ ಎಂದರು.
ನಮ್ಮ ಅಕಾಡೆಮಿಯ ನಾಲ್ಕು ಕ್ರೀಡಾ ಪಟುಗಳು ರಾಷ್ಟ್ರಮಟ್ಟ 2020ರ ಸ್ಪರ್ಧೆಯಲ್ಲಿ ಚಿನ್ನದ ಪದಕಗಳಿಸಿದ್ದಾರೆ. ಕೆ.ಅಡೋನೀಸ್, ತಂಗ್ಯ್ಫೂ, ಚರಿತ್ ಗೌಡ, ಕ್ಯಾರಿನ್ ಮಾರ್ಷಲ್, ಸಮರ್ಪಣಾ ಜೈನ್ ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ.
ಈ ನಾಲ್ವರು ಕ್ರೀಡಾ ಪಟುಗಳಲ್ಲಿ ಇಬ್ಬರು ಅಡೋನೀಸ್, ಚರಿತ್ ಸೈಕ್ಲಿಸ್ಟ್ ಭಾರತ ತಂಡಕ್ಕೆ ಮೊಟ್ಟಮೊದಲ ಬಾರಿಗೆ ಮೈಸೂರು ಜಿಲ್ಲೆಯಿಂದ ಆಯ್ಕೆ ಆಗಿದ್ದು, ಬುಧವಾರ ಸಂಜೆ 5 ಗಂಟೆಗೆ ಪಂಜಾಬ್ ರಾಜ್ಯದ ಪಟಿಯಾಲ ಕ್ರೀಡಾ ಸಂಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಘೋಷಿಸಿದೆ. ಇವರುಗಳಿಗೆ ವಿದ್ಯಾಭ್ಯಾಸ, ವಸತಿ, ಆಹಾರ, ಔಷಧೋಪಚಾರ ಮತ್ತು ಸೈಕ್ಲಿಂಗ್ ಕ್ರೀಡೆಗೆ ಸಂಬಂಧಪಟ್ಟ ಎಲ್ಲಾ ಸೌಲಭ್ಯಗಳನ್ನು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸೈಕ್ಲಿಂಗ್ ಕ್ರೀಡಾಪಟು ಅಡೋನೀಸ್ ಭಾರತದ ಅತ್ಯುತ್ತಮ ಅಡ್ಡಗುಡ್ಡಗಳ ಸೈಕ್ಲಿಂಗ್ ಕ್ರೀಡಾಪಟು ಎಂದು ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಪ್ರಶಸ್ತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
key words : 17th National-Mountain-Bike-Champion-Ship-Mysore-Cycling-sportsmen-Gold Medal