“ಫೆ.18ರಂದು ರಾಜ್ಯಾದ್ಯಂತ 3 ಗಂಟೆ ರೈಲು ತಡೆ ಚಳವಳಿ” : ರೈತ ಮುಖಂಡ ಕುರುಬೂರು ಶಾಂತಕುಮಾರ್

ಮೈಸೂರು,ಫೆಬ್ರವರಿ,16,2021(www.justkannada.in)  : ದೆಹಲಿ ರೈತರ ಹೋರಾಟ ಕರೆ ಬೆಂಬಲಿಸಿ ಫೆ.18ರಂದು ರಾಜ್ಯಾದ್ಯಂತ 3 ಗಂಟೆ ರೈಲು ತಡೆ ಚಳವಳಿ ನಡೆಸುವುದಾಗಿ ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.jkಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ದೆಹಲಿ ರೈತ ಚಳುವಳಿ ಬಗ್ಗೆ ಕೇಂದ್ರ ಸರ್ಕಾರ ರೈತ ಚಳುವಳಿಯ ಹತ್ತಿಕ್ಕುವ ಪ್ರಯತ್ನಕೆ ಹೆಚ್ಚು ಒತ್ತು ನೀಡುತ್ತಿದೆ. ನಾಟಕೀಯವಾಗಿ ವರ್ತಿಸುತ್ತಿದೆ. ಇದನ್ನು ಖಂಡಿಸಿ ದೇಶಾದ್ಯಂತ 18ರಂದು 12ಗಂಟೆಯಿಂದ ಮೂರು ಗಂಟೆ ತನಕ ರೈಲು ತಡೆ ಚಳವಳಿ ನಡೆಸಲು ಕರೆ ನೀಡಿರುವುದನ್ನು ಬೆಂಬಲಿಸಿ ಕರ್ನಾಟಕದಲ್ಲಿಯೂ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ಚಳವಳಿ ನಡೆಸಲಾಗುವುದು ಎಂದರು.

ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿ

ಕೇಂದ್ರ ಸರ್ಕಾರ  ಎಮ್ಮೆ ಚರ್ಮದ ಸರ್ಕಾರ ಮಳೆ ಚಳಿ ಗಾಳಿ ಬಿಸಿಲು ಯಾವುದಕ್ಕೂ ಪ್ರತಿಕ್ರಿಯೆ ಇಲ್ಲ. ಪ್ರಧಾನಿ ಮೋದಿಯವರು ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿ ಮಾಡಿದಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಾಗುತ್ತಿದೆ

ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ರಂಜನ್ ಗೂಗಯ್  ಹೇಳಿರುವುದು ಬಡಜನರಿಗೆ ದುಡಿಯುವ ವರ್ಗಕ್ಕೆ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದು ಕಷ್ಟಕರವಾಗಿದೆ. ಪ್ರಜಾಪ್ರಭುತ್ವ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಬಂಡವಾಳಶಾಹಿಗಳ ಶ್ರೀಮಂತರ ವಶಕ್ಕೆ ಸಿಲುಕುತ್ತಿದೆ. ಈ ಹೇಳಿಕೆಯ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕಾಗಿದೆ ಎಂದು ಹೇಳಿದರು.

ವ್ಯಾಪಾರಕ್ಕೆ ಕಾನೂನು ಮೂಲಕ ಖಾಸಗಿಯವರಿಗೆ ಅವಕಾಶ ಕೊಡಲಾಗಿದೆ

ರೈತ ಉತ್ಪನ್ನಗಳಿಗೆ ಕನಿಷ್ಠ ಶಾಸನಬದ್ಧ ಬೆಲೆ ಖಾತ್ರಿಗೊಳಿಸಿದ ಸರ್ಕಾರ. ಕೃಷಿ ಉತ್ಪನ್ನ ಖರೀದಿಸಲು ಯಾವುದೇ ನಿಯಂತ್ರಣವಿಲ್ಲದ, ರಹದಾರಿ ಇಲ್ಲದವರು, ಎಷ್ಟು ಬೇಕಾದರೂ ಎಲ್ಲಿ ಬೇಕಾದರೂ ಖರೀದಿಸಬಹುದು ಎನ್ನುವ ವ್ಯಾಪಾರಕ್ಕೆ ಕಾನೂನು ಮೂಲಕ ಖಾಸಗಿಯವರಿಗೆ ಅವಕಾಶ ಕೊಡಲಾಗಿದೆ. ಯಾವುದೇ ಅನುಮತಿ ಇಲ್ಲದವರು ವ್ಯಾಪಾರ ಮಾಡುವಾಗ ರೈತರಿಗೆ ವಂಚನೆ ಮಾಡಿದಾಗ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯಕ್ಕೆ ಹೋಗುವುದನ್ನು ಕಿತ್ತು ಹಾಕಲಾಗಿದೆ. ಇದೆಲ್ಲಾ ಜನಪ್ರತಿನಿಧಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ಕಬ್ಬಿನ ಎಫ್ ಆರ್ ಪಿ ಬೆಲೆಯನ್ನು ರಾಜ್ಯಸರ್ಕಾರವೇ ನಿಗದಿ ಮಾಡುವಂತಾಗಬೇಕು

ರಾಜ್ಯ ಸರ್ಕಾರ ಮಂಡಿಸುವ ಮುಂದಿನ ಬಜೆಟ್ ನಲ್ಲಿ ಕಬ್ಬಿನ ಎಫ್ ಆರ್ ಪಿ ಬೆಲೆಯನ್ನು ರೈತರ ಹೊಲದಲ್ಲಿನ ದರ ಎಂದು ರಾಜ್ಯಸರ್ಕಾರವೇ ನಿಗದಿ ಮಾಡುವಂತಾಗಬೇಕು. ಕಬ್ಬಿಗೆ ಫಸಲ್ ಭೀಮಾ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು. ಹಣ್ಣು-ತರಕಾರಿ ಎಲ್ಲ ಬೆಳೆಗಳಿಗೆ ಶಾಸನಬದ್ಧ ಖಾತ್ರಿ ಕನಿಷ್ಠ ಬೆಂಬಲ ಬೆಲೆ ನಿಗದಿಮಾಡುವ ಮಾನದಂಡ ಜಾರಿಗೆ ಬರಬೇಕು ಕೇರಳ ರಾಜ್ಯದ ಮಾದರಿಯಲ್ಲಿ ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರಿಗೆ 4000 ಕೋಟಿ ಕಬ್ಬಿನ ಹಣ ಬಾಕಿ18th-February-Statewide 3 o'clock-Railway-barriers-Movement- Farmer-leader-Kuruburu Shanthakumar

ರಾಜ್ಯದಲ್ಲಿ, ಆರು ತಿಂಗಳಿಗೊಮ್ಮೆ ಸಕ್ಕರೆ ಸಚಿವರು, ಸಕ್ಕರೆ ಅಭಿವೃದ್ಧಿ ಆಯುಕ್ತರು ಬದಲಾಗುತ್ತಿರುವುದು ಕಬ್ಬು ಬೆಳೆಗಾರರ ಸಮಸ್ಯೆಗಳು ಏರಿಕೆಯಾಗಲು ಹಾಗೂ ಪರಿಹಾರ ಸಿಗಲು ಕಷ್ಟವಾಗುತ್ತಿದೆ. ಕಬ್ಬು ಬೆಳೆಗಾರರಿಗೆ 4000 ಕೋಟಿ ಕಬ್ಬಿನ ಹಣ ಬಾಕಿ ಬರಬೇಕಾಗಿದೆ. ಇದನ್ನು ಕೊಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್ ಇತರರು ಉಪಸ್ಥಿತರಿದ್ದರು.

ENGLISH SUMMARY…

Rail roko protest for 3 hours on Feb. 18: Kurubur Shanthakumar
Mysuru, Feb. 16, 2021 (www.justkannada.in): Karnataka State Sugarcane Growers’ Association and State Farmer Federations President Kuruburu Shanthakumar today informed that a protest would be held on February 18 supporting the farmers protest in New Delhi, by stopping trains for three hours in the State.
The Union Government is trying to suppress the farmers’ protest against its new farm laws. The government is behaving dramatically. Hence we have decided to protest by halting trains from noon on February 18 for three hours, supporting the farmers.
“Even former Supreme Court Justice Ranjan Gogoi has also said that it has become difficult for the poor to get justice in courts. Democracy is going towards a dangerous situation, it is going into the hands of capitalists. Every one of us has to think about this seriously,” he said.
Keywords: Kurubur Shanthakumar/ Rail roko in state on February 18/ rail roko for 3 hours/ farmers protest

key words : 18th-February-Statewide 3 o’clock-Railway-barriers-Movement- Farmer-leader-Kuruburu Shanthakumar