ಬೆಂಗಳೂರು:ಜೂ-18:(www.justkannada.in) ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಿಢೀರ್ ಬದಲಾವಣೆ ಮಾಡಲಾಗಿದ್ದು, 19 ಐಪಿಎಸ್ ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಐಜಿಪಿ ರ್ಯಾಂಕ್ ನಿಂದ ಎಡಿಜಿಪಿಗೆ ಬಡ್ತಿ ನೀಡಿ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಟಿ.ಸುನಿಲ್ ಕುಮಾರ್ ವಿಭಾಗ ಎಡಿಜಿಪಿ ಆಗಿ ವರ್ಗಾವಣೆಯಾಗಿದ್ದಾರೆ. ರವಿ ಡಿ. ಚನ್ನಣ್ಣನವರ್ ಸಿಐಡಿ ಎಸ್ಪಿ ಆಗಿ ವರ್ಗಾವಣೆಯಾಗಿದ್ದು, ಅಮ್ರಿತ್ ಪೌಲ್ ಪಶ್ಚಿಮ ವಲಯ ಐಜಿಪಿ, ಉಮೇಶ್ಕುಮಾರ್ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ ನೇಮಕಮಾಡಲಾಗಿದೆ.
ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ ಹೀಗಿದೆ:
* ಉಮೇಶ್ ಕುಮಾರ್ – ಬೆಂಗಳೂರು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ವರ್ಗಾವಣೆ
* ರವಿಕಾಂತೆ ಗೌಡ – ಸಿಸಿಬಿ ಮುಖ್ಯಸ್ಥರಾಗಿ ವರ್ಗಾವಣೆ
* ಬಿ.ಕೆ ಸಿಂಗ್ – ಗೃಹ ಇಲಾಖೆಯ ಕಾರ್ಯದರ್ಶಿ (PCAS)ಯಾಗಿ ವರ್ಗಾವಣೆ
* ಅಮ್ರಿತ್ ಪೌಲ್ – ಈಸ್ಟರ್ನ್ ರೇಂಜ್ ಐಜಿಪಿ ಆಗಿ ವರ್ಗಾವಣೆ
* ಸೌಮೆಂದು ಮುಖರ್ಜಿ- ಬೆಂಗಳೂರು ಇಂಟರ್ನಲ್ ಸೆಕ್ಯುರಿಟಿ ಐಜಿಪಿ ಆಗಿ ವರ್ಗಾವಣೆ
* ರಾಘವೇಂದ್ರ ಸುಹಾಸ್ ಸದರನ್ – ರೇಂಜ್ ಐಜಿಪಿ ಆಗಿ ವರ್ಗಾವಣೆ
* ಅಮಿತ್ ಸಿಂಗ್ – ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗದ ಎಸ್ಪಿ ಆಗಿ ವರ್ಗಾವಣೆ
* ರಾಮ್ ನಿವಾಸ್ ಸೆಪಟ್ – ಎಸಿಬಿ ಎಸ್ಪಿ ಆಗಿ ವರ್ಗಾವಣೆ
* ಎಂ.ಎನ್ ಅನುಚೇತ್ – ರೈಲ್ವೆ ಎಸ್ಪಿ ಆಗಿ ವರ್ಗಾವಣೆ
* ಬಿ.ರಮೇಶ್ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಆಗಿ ವರ್ಗಾವಣೆ
* ರವಿ ಡಿ. ಚನ್ನಣ್ಣನವರ್ – ಸಿಐಡಿ ಎಸ್ಪಿ ಆಗಿ ವರ್ಗಾವಣೆ
* ಡಾ. ಭೀಮಾಶಂಕರ್ ಎಸ್ ಗುಳೇದ್ – ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಆಗಿ ವರ್ಗಾವಣೆ
* ಸಿ.ಬಿ ರಿಶ್ಯಂತ್ – ಮೈಸೂರು ಎಸ್ಪಿ ಆಗಿ ವರ್ಗಾವಣೆ
* ಸುಜೀತಾ- ಕೆ.ಜಿ.ಎಫ್ ಗೆ ಎಸ್ಪಿ ಆಗಿ ವರ್ಗಾವಣೆ
* ಟಿಪಿ ಶಿವಕುಮಾರ್ – ಬೆಂಗಳೂರು ಗ್ರಾಮಾಂತರ ಎಸ್ಪಿ ಆಗಿ ವರ್ಗಾವಣೆ
* ಎನ್ ವಿಷ್ಣುವರ್ಧನ – ಬೆಂಗಳೂರು ಅಡಳಿತ ಡಿಸಿಪಿ ಅಗಿ ವರ್ಗಾವಣೆ
* ಕಲಾ ಕೃಷ್ಣ ಸ್ವಾಮಿ – ಎಫ್ಎಸ್ಎಲ್ ನಿರ್ದೇಶಕರಾಗಿ ವರ್ಗಾವಣೆ
ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ; ಅಲೋಕ್ ಕುಮಾರ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ, ರವಿ ಚೆನ್ನಣ್ಣನವರ್ ಸಿಐಡಿ ಎಸ್ಪಿ ಆಗಿನೇಮಕ
19 IPS officers transferred in Karnataka, Alok Kumar appointed Bengaluru’s police commissioner
Additional Commissioner of Police, Crime, Alok Kumar has replaced T Suneel Kumar as Bengaluru police commissioner after a major reshuffle in the police force by the Karnataka government.