ಬೆಂಗಳೂರು,ಸೆಪ್ಟಂಬರ್,25,2021(www.justkannada.in): ಕೋವಿಡ್ ಗೆ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್ ನಿಂದ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಕೊರೊನಾ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಿಪಿಎಲ್ ಕುಟಂಬಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ 1 ರೂ ಲಕ್ಷ ಪರಿಹಾರವನ್ನು ಅರ್ಹ ಸಂತ್ರಸ್ತ ಕುಟುಂಬದ ವಾರಸುದಾರರಿಗೆ ನೀಡಲು ಸರ್ಕಾರ ಆದೇಶಿಸಿದೆ.
ಡಿಸಿಗಳ ಪಿಡಿ ಖಾತೆಯಿಂದ ಪರಿಹಾರ ವಿತರಿಸುವಂತೆ ಸೂಚನೆ ನೀಡಲಾಗಿದೆ. ಪಿಡಿ ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನ ಬಳಸಿಕೊಳ್ಳಬೇಕು. ಪಿಡಿ ಖಾತೆಯಿಂದ ಪರಿಹಾರ ನೀಡಬೇಕು. ಪರಿಹಾರ ನೀಡುವಲ್ಲಿ ಲೋಪಗಳಾದರೇ ಜಿಲ್ಲಾಧಿಕಾರಿಗಳೇ ಹೊಣೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
Key words: 1lakh – family – victim –covid death- Official order – government.
ENGLISH SUMMARY…
Govt. announces Rs. 1 lakh compensation for the kith of those who died of COVID
Bengaluru, September 25, 2021 (www.justkannada.in): The State Government has issued orders giving powers to the Deputy Commissioners of all the districts to provide Rs. 1 lakh compensation to the family members of those who died due to the COVID-19 Pandemic.
Instructions have been given to release the grants to the Deputy Commissioners PD accounts and are asked to utilize the amount.
Keywords: Rs. 1 lakh compensation/ family members/ deceased/ COVID-19 Pandemic