ತಿರುಪತಿ, ಮಾರ್ಚ್ 23, 2020 (www.justkannada.in): ಕೊರೋನಾ ವೈರಸ್ ಭೀತಿಯಿಂದಾಗಿ ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ತಿರುಮಲ ದೇವಾಲಯಕ್ಕೆ ಬರುವ ಭಕ್ತರಿಗೆ ನೀಡಲು ಸಿದ್ದ ಮಾಡಿಟ್ಟಿದ್ದ ಸುಮಾರು 2.4 ಲಕ್ಷ ಲಡ್ಡುಗಳು ಹಾಗೆಯೇ ಉಳಿದಿದ್ದು ಅವುಗಳನ್ನು ಟಿಟಿಡಿಯ 21,000 ನೌಕರರಿಗೆ ಉಚಿತವಾಗಿ ವಿತರಿಸಲಾಗುವುದು.
ಪ್ರತಿದಿನ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಸುಮಾರು 1 ಲಕ್ಷ ಜನ ಭೇಟಿ ನೀಡುತ್ತಾರೆ. ಪ್ರತಿ ಭಕ್ತರಿಗೆ ಒಂದು ಉಚಿತ ಲಡ್ಡು ನೀಡಲಾಗುತ್ತದೆ. ಭಕ್ತರು ಹೆಚ್ಚುವರಿಯಾಗಿ ಲಡ್ಡು ಖರೀದಿಸುವುದರಿಂದ ದಿನಕ್ಕೆ ಸರಿಯಾಗಿ ಮೂರು ಲಕ್ಷ ಲಡ್ಡು ಮಾರಾಟವಾಗುತ್ತದೆ.
ಈಗ ಭಕ್ತರಿಗೆ ನಿರ್ಬಂಧ ಹೇರಿರುವುದರಿಂದ ಉಳಿದ 2.4 ಲಕ್ಷ ಲಡ್ಡುಗಳನ್ನು ನೌಕರರಿಗೆ ವಿತರಿಸಲಾಗುವುದು ಎಂದು ಹೇಳಲಾಗಿದೆ.