ಕಲ್ಬುರ್ಗಿ,ಸೆಪ್ಟಂಬರ್,7,2020(www.justkannada.in): ಕೊರೋನಾ, ಲಾಕ್ ಡೌನ್ ಮಾಡಿದ್ದ ಹಿನ್ನೆಲೆ ಇದೀಗ ಸಾರಿಗೆ ಇಲಾಖೆಗೆ ಪ್ರತಿದಿನ 2.5 ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹರಡುತ್ತಿದ್ದ ಹಿನ್ನೆಲೆ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಈ ವೇಳೆ ಕೆಎಸ್ ಆರ್ ಟಿಸಿ ಬಸ್, ಖಾಸಗಿ ಬಸ್, ಆಟೋ ಟ್ಯಾಕ್ಸಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ನಡುವೆ ಲಾಕ್ ಡೌನ್ ತೆರವುಗೊಳಿಸಿ ಬಸ್ ಸಂಚಾರ ಆರಂಭವಾಗಿದ್ದರೂ ಕೊರೋನಾ ಭೀತಿಯಿಂದಾಗಿ ಜನರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.
ಈ ಸಂಬಂಧ ಕಲ್ಬುರ್ಗಿಯಲ್ಲಿ ಮಾತನಾಡಿರುವ ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ, ಸಾರಿಗೆ ಇಲಾಖೆಗೆ ಪ್ರತಿ ದಿನ 2.5 ಕೋಟಿ ರೂ ನಷ್ಟ ಉಂಟಾಗುತ್ತಿದೆ. ಅದ್ದರಿಂದ ಅಂತರಾಜ್ಯ ಸಾರಿಗೆ ಪ್ರಾರಂಭ ಬಗ್ಗೆ ಮಾತುಕತೆ ನಡೆಸಲಾಗಿದೆ. ಈಗಾಗಲೇ ಹೊರ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು. ಅವರು ದೆಹಲಿಗೆ ಹೋಗುವ ಬಗ್ಗೆ ಮಾಹಿತಿ ಇಲ್ಲ. ಸಿಎಂ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದಾರೆ.
ಇನ್ನು ಡ್ರಗ್ಸ್ ಹಣದಿಂದಲೇ ಸಮ್ಮಿಶ್ರ ಸರ್ಕಾರ ಬೀಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ್ ಸವದಿ, ಹೆಚ್.ಡಿ ಕುಮಾರಸ್ವಾಮಿಗೆ ಈಗ ಜ್ಞಾನೋದಯವಾದಂತೆ ಕಾಣುತ್ತಿದೆ. ಅವರು ಸಿಎಂ ಆಗಿದ್ದಾಗ ಪೊಲೀಸ್ ಇಲಾಖೆ, ಇಂಟಲಿಜನ್ಸ್ ಅವರ ಬಳಿ ಇತ್ತು. ಆದರೆ ಸಮರ್ಥ ಸರ್ಕಾರ ನೀಡೋಕೆ ಆಗದೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.
Key words: 2.5 crores – Loss-per day – transport department – DCM Laxman Savadi.