ಬೆಂಗಳೂರು,ಮೇ,21,2021(www.justkannada.in): ರಾಜ್ಯಕ್ಕಿಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಬರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಡಾ.ಕೆ.ಸುಧಾಕರ್, ರಾಜ್ಯಕ್ಕಿಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಬರಲಿದೆ. ರಾಜ್ಯ ಸರ್ಕಾರದ ಖರೀದಿ ಒಪ್ಪಂದದ ಮೇರೆಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆ ಬರಲಿದೆ.
ರಾಜ್ಯ ಸರ್ಕಾರದ ಆದೇಶದ ಅನ್ವಯ ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಅನ್ನು ಸ್ವೀಕರಿಸಲಾಗುವುದು. ಇಲ್ಲಿಯವರೆಗೆ 1,24,20,510 ಡೋಸ್ಗಳನ್ನು 1,13,26340(1,01,60,060 ಕೋವಿಶೀಲ್ಡ್ ಮತ್ತು 11,66,280 ಕೋವಾಕ್ಸಿನ್) ಅನ್ನು ಸ್ವೀಕರಿಸಿದ್ದೇವೆ. ಕೇಂದ್ರದ 10,94,170 ಡೋಸ್ (9,50,000 ಕೋವಿಶೀಲ್ಡ್ ಮತ್ತು 1,44,170 ಕೋವಾಕ್ಸಿನ್) ಗಳನ್ನು ಸ್ವೀಕರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Key words: 2 lakh -doses – covishield – Health Minister -Dr. K. Sudhakar.