ಬೆಂಗಳೂರು,ಮಾರ್ಚ್,13,2021(www.justkannada.in) : ಎರಡು ಕಡೆ ವಿಧಾನಮಂಡಲ ಅಧಿವೇಶನ ನಡೆಸುತ್ತಿರುವ ನಿಟ್ಟಿನಲ್ಲಿ ಈ ಕುರಿತು ಸ್ಪೀಕರ್ ಅವರೊಂದಿಗೆ ಚರ್ಚಿಸುವುದಾಗಿ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಮಾಹಿತಿ ಪಡೆಯುವ ಚಿಂತನೆ ತಮ್ಮದಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಒಲವು ತಮ್ಮದಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದಿದ್ದಾರೆ.
ಬೆಳಗಾವಿಗೆ ಕಚೇರಿಗಳ ಸ್ಥಳಾಂತರ ಅವಶ್ಯವಾಗಿದೆ. ಆದರೆ, ಸುವರ್ಣಸೌಧದಲ್ಲಿ ಕಚೇರಿಗಳಿಗೆ ಸ್ಥಳವಕಾಶ ಇಲ್ಲವಾಗಿದೆ. ವಿಧಾನಪರಿಷತ್ತು ಸದನವನ್ನು ಕಾಲಮಿತಿಗೆ ಅನುಗುಣವಾಗಿ, ಆಯಾ ದಿನದ ಅಜೆಂಡಾ ಮುಗಿಸಲು ಒತ್ತು ನೀಡಲಾಗಿದೆ ಎಂದು ಹೇಳಿದರು.
ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕಾಗಿದೆ
ಪ್ರಶ್ನೋತ್ತರ ವೇಳೆ ಇತರೆ ಸದಸ್ಯರಿಗೆ ಉಪ ಪ್ರಶ್ನೆ ಕೇಳಲು ಅವಕಾಶ ನೀಡುತ್ತಿಲ್ಲ. ಸದನದ ಎಲ್ಲಾ ಸದಸ್ಯರು ಸಹಕಾರ ನೀಡುತ್ತಿದ್ದರಿಂದ ಇದು ಸಾಧ್ಯವಾಗುತ್ತಿದೆ ಎಂದರು. ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕಾಗಿದೆ. ಈ ಬಗ್ಗೆ ಸರಕಾರ ತೀರ್ಮಾನ ತೆಗೆದುಕೊಳ್ಳಬೇಕೆಂದರು.
key words : 2 sides-legislative-assembly-session-Speaker-addition-Discussion-legislative-council-chairman-Basavaraja horatti