ಮೈಸೂರು, ಮಾರ್ಚ್ 23, 2020 (www.justkannada.in):ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ವಿಚಾರವನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅನೇಕ ಕಡೆ ಅಂಗಡಿ ತೆರೆಯಲಾಗಿದೆ. ಇವತ್ತು ಪೊಲೀಸರು ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡುತ್ತಾರೆ. ನಾಳೆಯಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಎಚ್ಚರಿಕೆ
ಮನೆಯಲ್ಲಿರುವಂತೆ ಹೇಳಿದ್ರು ಮನವಿಗೆ ಸ್ಪಂದಿಸದ ಹಿನ್ನಲೆ. ಅನವಶ್ಯಕವಾಗಿ ತಿರುಗಾಡಿದ್ರೆ ಕೇಸ್ ಹಾಕಲು ಆದೇಶ ನೀಡಲಾಗಿದೆ. ಐಪಿಎಸ್ ಸೆಕ್ಷನ್ (270)ಅಡಿಯಲ್ಲಿ ಕೇಸ್ ದಾಖಲು ಮಾಡಲಾಗುತ್ತದೆ. 2ವರ್ಷ ಜೈಲು ಶಿಕ್ಷೆ ಹಾಗೂ ಈ ಪ್ರಕರಣಕ್ಕೆ ಜಾಮೀನು ಕೂಡ ಇಲ್ಲ ಎಂದು ತಿಳಿಸಿದ್ದಾರೆ.
ಮಳಿಗೆ ತೆರೆಯುವಂತಿಲ್ಲ, ಗುಂಪು ಸೇರುವಂತಿಲ್ಲ. ಹಾಗೆ ಆದರೆ ಕೇಸ್ ಹಾಕೋದು ಖಂಡಿತ. ಕೆಲವರು ಎಷ್ಟೇ ಹೇಳಿದರು ಕೇಳ್ತಿಲ್ಲ. ಹೀಗೆ ಮಾಡಿದ್ರೆ ಒಂದತ್ತು ಜನಕ್ಕೆ ಕೇಸ್ ಆಗೋದಂತು ಪಕ್ಕ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ ಪಿ ರಿಷ್ಯಂತ್ ಹೇಳಿದ್ದಾರೆ.