ಮೈಸೂರು,ಡಿಸೆಂಬರ್,8,2020(www.justkannada.in): ಗ್ರಾಮ ಪಂಚಾಯತಿ ಚುನಾವಣೆಗೆ 1.15 ಕೋಟಿ ಮೊತ್ತದ 5 ಎಂ ಎಲ್ ನ 99,000 ಫಿಯಲ್ಸ್ ಗಳಿಗೆ ಚುನಾವಣಾ ಆಯೋಗ ಬೇಡಿಕೆ ಇಟ್ಟಿದೆ. ಸಮಯಕ್ಕೆ ಸರಿಯಾಗಿ ಬೇಡಿಕೆ ಇಟ್ಟಿರುವ ಇಂಕ್ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ ಎಂದು ಮೈಸೂರು ಪಾಯಿಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ ಅಧ್ಯಕ್ಷ ಎನ್ .ವಿ ಪಣೀಶ್ ತಿಳಿಸಿದರು.
ಮೈಸೂರು ಪಾಯಿಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ ಅಧ್ಯಕ್ಷ ಎನ್ .ವಿ ಪಣೀಶ್ ಸುದ್ದಿಗೋಷ್ಠಿ ನಡೆಸಿ ಕಂಪನಿ ವಹಿವಾಟಿನ ಬಗ್ಗೆ ಮಾಹಿತಿ ನೀಡಿದರು. ಇದಕ್ಕೂ ಮೊದಲು ತಮ್ಮನ್ನ ಮೈಲಾಕ್ ಅಧ್ಯಕ್ಷರಾಗಿ ನೇಮಿಸಿದ ಸಿಎಂ ಬಿ ಎಸ್ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಣೀಶ್, 2019-20 ಸಾಲಿನಲ್ಲಿ ಕಂಪನಿ ಒಟ್ಟು 21.52 ಕೋಟಿ ವಹಿಟಾಟು ನೆಡೆಸಿದೆ. ಅದರಲ್ಲಿ 4.59 ಕೋಟಿ ಪಾಯಿಂಟ್ಸ್ ವಹಿವಾಟು ಮತ್ತು 16.93 ಕೋಟಿ ಅಳಿಸಲಾಗದ ಶಾಹಿಯದ್ದಗಿದ್ದು ಕಂಪನಿಗೆ 4.70 ಲಾಭ ಪಡೆದಿದೆ. ತಮ್ಮ ಷೇರುದಾರರಿಗೆ ಶೇ. 25 ಡಿವಿಡೆಂಟ್ ಘೋಷಣೆ ಮಾಡಲಾಗಿದೆ. 2019-20ನೇ ಸಾಲಿನಲ್ಲಿ 2.17 ಕೋಟಿಯಷ್ಟು ಅಳಿಸಲಾಗದ ಶಾಯಿ ರಫ್ತು ವಹಿವಾಟು ನಡೆಸಿದ್ದು, ಕಂಪನಿಯ CSR ಫಂಡ್ ನಲ್ಲಿ 20.57 ಲಕ್ಷ ರೂ.ವನ್ನ ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಗೆ ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳಿಗೆ ವಿನಿಯೋಗ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
2020-21 ನೇ ಸಾಲಿಗೆ 20.00 ಕೋಟಿ ವಹಿವಾಟಿನ ಗುರಿ ಹೊಂದಿದ್ದು ಈಗಾಗಲೇ 12.25 ಕೋಟಿ ವಹಿವಾಟು ನಡೆಸಲಾಗಿದೆ ಎಂದರು.
ಹಾಗೆಯೇ 2020-21 ಸಾಲಿನ ಬಿಹಾರ ವಿಧಾನಸಭಾ ಚುನಾವಣೆ ಹಾಗೂ ರಾಷ್ಟ್ರದಾದ್ಯಂತ ಜರುಗಿದ ಲೋಕಸಭೆ / ವಿಧಾನಸಭೆ ಉಪಚುನಾವಣೆಗಳಿಗೂ ಸಹ ಅಳಿಸಲಾಗದ ಶಾಯಿ ಪೂರೈಕೆ ಮಾಡಿದ್ದೇವೆ. ಗ್ರಾಮ ಪಂಚಾಯತಿ ಚುನಾವಣೆಗೆ 1.15 ಕೋಟಿ ಮೊತ್ತದ 5 ಎಂ ಎಲ್ ನ 99,000 ಫಿಯಲ್ಸ್ ಗಳಿಗೆ ಚುನಾವಣಾ ಆಯೋಗ ಬೇಡಿಕೆ ಇಟ್ಟಿದೆ. ಸಮಯಕ್ಕೆ ಸರಿಯಾಗಿ ಬೇಡಿಕೆ ಇಟ್ಟಿರುವ ಇಂಕ್ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ ಎಂದು ಪಣೀಶ್ ತಿಳಿಸಿದರು.
Key words: 20.00 crore -turnover – year 2020-21- Chairman – Mysore Points and Varnish Limited- V Panish,