ಮೈಸೂರು,ಜೂನ್,29,2023(www.justkannada.in): ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಸರಿಯಾಗಿ ಮಳೆಯಾಗದ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಇದರಿಂದ ಸಾಂಸ್ಕೃತಿಕ ನಗರಿ ಮೈಸೂರು ಕೂಡ ಹೊರತೇನಲ್ಲ. ಹೌದು, ಸರಿಯಾಗಿ ಮಳೆ ಬರದಿದ್ದರೇ ಮೈಸೂರಿನ ನಿವಾಸಿಗಳಿಗೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ.
ಮುಂದಿನ 20 ದಿನಗಳಲ್ಲಿ ಮೈಸೂರಿಗೆ ಬರಗಾಲ ಕಾಡುವ ಸಾಧ್ಯತೆ ಇದ್ದು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ನಗರದ ಜನತೆ ನೀರನ್ನ ಮಿತವಾಗಿ ಬಳಸದಿದ್ದರೆ ನೀರಿನ ಸಮಸ್ಯೆ ಉದ್ಬವವಾಗಲಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಮೈಸೂರು ಮಹಾನಗರ ಪಾಲಿಕೆ ತಿಣುಕಾಡುತ್ತಿದೆ.
ಪ್ರತಿನಿತ್ಯ ಮೈಸೂರಿಗೆ 305 ಎಂಎಲ್ಡಿ ನೀರು ಬೇಕಿದ್ದು, ಕಬಿನಿ ಹಾಗೂ ಕಾವೇರಿ ನದಿಯಿಂದ ಕುಡಿಯುವ ನೀರು ಪಡೆಯಲಾಗುತ್ತಿದೆ. ಸದ್ಯಕ್ಕೆ ಎರಡೂ ನದಿಗಳಲ್ಲಿ 20 ದಿನಗಳಷ್ಟೇ ನೀರು ಬಾಕಿಯಿದೆ. ನದಿಗಳು ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದರೆ ಮೈಸೂರಿಗೆ ನೀರಿಗೆ ಆಹಾಕಾರ ಉಂಟಾಗಲಿದ್ದು, ದಿನ ಒಂದೋಂದೆ ಮೋಟರ್ ಬಂದ್ ಆಗಲಿದೆ. ಹೀಗಾಗಿ ಮಳೆ ಮೇಲೆ ಮೈಸೂರು ನಗರದ ಕುಡಿಯುವ ನೀರಿನ ಭವಿಷ್ಯ ನಿಂತಿದೆ. ಇನ್ನು ಮಳೆ ಬೀಳುವವರೆಗೂ ನೀರು ಮಿತವಾಗಿ ಬಳಸುವಂತೆ ಪಾಲಿಕೆ ಮನವಿ ಮಾಡಿದೆ.
Key words: 20 days –Mysore- city -will -suffer -drinking water