ಹಾಸನ, ಮೇ 20, 2020 (www.justkannada.in): ಹಾಸನ ಜಿಲ್ಲೆಯಲ್ಲಿ ಇಂದು 21 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಈವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಂದು 21 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 16 ಮಂದಿ ಚನ್ನರಾಯಪಟ್ಟಣ, 2 ಮಂದಿ ಹೊಳೆನರಸೀಪುರ, 3 ಮಂದಿ ಹಾಸನದವರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಇವರೆಲ್ಲಾ ಹೊರರಾಜ್ಯದಿಂದ ಬಂದವರಾಗಿದ್ದು, 19 ಮಂದಿ ಮುಂಬೈನಿಂದ ಹಾಗೂ ಇನ್ನಿಬ್ಬರು ತಮಿಳುನಾಡಿನಿಂದ ಬಂದಿದ್ದಾರೆ. ತಮಿಳುನಾಡಿನಿಂದ ಬಂದಿರುವ ಇಬ್ಬರು ದಂಪತಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾಹಿತಿ ನೀಡಿದರು.
ಈಗ ಪಾಸಿಟಿವ್ ಕಂಡುಬಂದವರು ಎಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರೇ ಆಗಿದ್ದಾರೆ. ಯಾರೂ ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ಇನ್ನೂ 400 ಮಂದಿಯ ವರದಿ ಬರಬೇಕಿದೆ. ಸೇವಾ ಸಿಂಧೂ ಆಯಪ್ನಲ್ಲಿ 1200 ಮಂದಿ ಜಿಲ್ಲೆಗೆ ಬರಲು ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ಯಾರು ಹೊರರಾಜ್ಯದಿಂದ ಪಾಸ್ ತೆಗೆದುಕೊಂಡಿದ್ದಾರೆ ಅವರಿಗಷ್ಟೇ ಜಿಲ್ಲೆಗೆ ಬರಲು ಅವಕಾಶ ನೀಡಲಾಗಿದೆ. ಈವರೆಗೆ ಹಾಸನ ಜಿಲ್ಲೆಯಲ್ಲಿ 1549 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ ಎಂದು ತಿಳಿಸಿದರು.