ಬೆಂಗಳೂರಿನಲ್ಲಿ ಜ.5ರಂದು 22ನೇ ಚಿತ್ರಸಂತೆ

ಬೆಂಗಳೂರು, ಡಿಸೆಂಬರ್​ 28,2024 (www.justkannada.in):  ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಜನವರಿ 5ರಂದು 22ನೇ ಚಿತ್ರಸಂತೆ ಆಯೋಜನೆ ಮಾಡಲಾಗಿದ್ದು,  ಈ ಬಾರಿ ಹೆಣ್ಣು ಮಗುವಿಗೆ ಚಿತ್ರ ಸಂತೆ ಸಮರ್ಪಣೆ ಮಾಡಲಾಗುತ್ತಿದೆ.

ಕರ್ನಾಟಕ ಚಿತ್ರಕಲಾ ಪರಿಷತ್​​ ನಿಂದ ನಗರದ ಕುಮಾರಕೃಪಾ ರಸ್ತೆಯಲ್ಲಿ ಜನವರಿ 5ರಂದು 22ನೇ ಚಿತ್ರಸಂತೆ ಆಯೋಜನೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ ರಾತ್ರಿ 9ರವರೆಗೆ ಚಿತ್ರಸಂತೆ ನಡೆಯಲಿದ್ದು,  20 ರಾಜ್ಯಗಳ ಕಲಾವಿದರ ಕಲಾಕೃತಿಗಳ ಅನಾವರಣಗೊಳ್ಳಲಿದೆ. ಚಿತ್ರಸಂತೆಯಲ್ಲಿ ಭಾಗವಹಿಸಲು 3,177 ಕಲಾವಿದರಿಂದ ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿ ಹೆಣ್ಣು ಮಗುವಿಗೆ ಚಿತ್ರ ಸಂತೆ ಸಮರ್ಪಣೆ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಚಿತ್ರಸಂತೆ ಈಗಾಗಲೇ ಸಾಕಷ್ಟು ಜನಪ್ರಿಯ ಗಳಿಸಿದೆ. ಸಾಕಷ್ಟು ಕಲಾವಿದರು ಈ ಚಿತ್ರಸಂತೆಗಾಗಿ ಕಾಯುತ್ತಿರುತ್ತಾರೆ. ಇನ್ನು ಪ್ರತಿವರ್ಷ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ನಡೆಯುವುದರಿಂದ ಜನವರಿ 5ರಂದು ಅದಕ್ಕೆ ಮೀಸಲಾಗಿರುತ್ತದೆ. ಪರ್ಯಾಯ ಮಾರ್ಗಗಳನ್ನು ಸಂಚಾರಿ ಪೊಲೀಸರು ಸೂಚಿಸುತ್ತಾರೆ.

Key words: 22nd Chitra Santhe, Bengaluru, January 5th