ಮೈಸೂರು,ನ,1,2019(www.justkannada.in): ಕನ್ನಡ ಅಂಕಿ ಬಳಸಿದ್ದಕ್ಕೆ ಅಮಾನತು ಶಿಕ್ಷೆಗೆ ಒಳಗಾಗಿ ನಂತರ ಅಮಾನತು ಅದೇಶ ರದ್ದುಗೊಂಡು ಕೆಲಸ ನಿರ್ವಹಿಸಿದರೂ ಕಳೆದ 23 ವರ್ಷದ ಸಂಬಳ ಇನ್ನೂ ಸಿಗದ ಹಿನ್ನೆಲೆ ಕನ್ನಡ ಅಭಿಮಾನಿ ಸಂಬಳಕ್ಕಾಗಿ ಹೋರಾಟ ನಡೆಸುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಅಗ್ರಹಾರದ ನಿವೃತ್ತ ದ್ವಿತೀಯ ದರ್ಜೆ ನೌಕರ ರಾಮಚಂದ್ರ ಆಚಾರಿ ಎಂಬುವವರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ರಾಮಚಂದ್ರ ಅವರು 1984ರಲ್ಲಿ ಹಾಸನದ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಂಬಳದ ಬಿಲ್ನಲ್ಲಿ ಕನ್ನಡ ಬಳಕೆ ಮಾಡಿದ್ದರು. ಹೀಗಾಗಿ ಕನ್ನಡ ಅಂಕಿ ಬಳಸಿದ್ದಕ್ಕೆ ರಾಮಚಂದ್ರ ಅಮಾನತು ಶಿಕ್ಷೆಗೆ ಒಳಗಾಗಿದ್ದರು.
ಬಳಿಕ ರಾಮಚಂದ್ರ ಅವರು ಹೋರಾಟ ನಡೆಸಿ ಅಮಾನತು ರದ್ದುಗೊಳಿಸಿಕೊಂಡಿದ್ದರು. ಇದಾದ ನಂತರ ಮೇಲಾಧಿಕಾರಿಗಳು ರಾಮಚಂದ್ರ ಅವರಿಗೆ ನಿರಂತರ ಕಿರುಕುಳ ನೀಡಿ ಉದ್ದೇಶಪೂರ್ವಕವಾಗಿ 22 ಪ್ರಕರಣ ದಾಖಲಿಸಿದ್ದರು. ರಾಮಚಂದ್ರ ಅವರ ವಿರುದ್ದ ದಾಖಲಾಗಿದ್ದ ಎಲ್ಲಾಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಯಾಗಿತ್ತು.
ಬಳಿಕ ಕರ್ತವ್ಯ ನಿರ್ವಸಿದ್ದ ರಾಮಚಂದ್ರ ಅವರು 2015ರಲ್ಲಿ ನಿವೃತ್ತರಾಗಿದ್ದರು. ಆದರೆ ರಾಮಚಂದ್ರ ಅವರಿಗೆ ಇದುವರೆಗೂ 23 ವರ್ಷದ ಸಂಬಳ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹಾಗೆಯೇ ನಿವೃತ್ತಿ ನಂತರದ ನಿವೃತ್ತಿ ವೇತನಕ್ಕೂ ಕತ್ತರಿ ಬಿದ್ದಿದ್ದು ಇದೀಗ ನ್ಯಾಯಕ್ಕಾಗಿ ವೃದ್ದ ರಾಮಚಂದ್ರ ಅವರು ಅಲೆಯುತ್ತಿದ್ದಾರೆ. ಈ ಬಗ್ಗೆ ಡಿಸಿಗೆ ಮನವಿ ಸಲ್ಲಿಸಿದ್ದಾರೆ.
Key words: 23-yea-salary not – give- Fighting -Kannada fan – justice