ಬೆಂಗಳೂರು,ಜನವರಿ,12,2021(www.justkannada.in): ಕೇಂದ್ರ ಸರ್ಕಾರ 1.1 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆ ಖರೀದಿಸಿದ್ದು ಇದರ ವೆಚ್ಚ 231 ಕೋಟಿ ರೂ ಆಗಿದೆ. ಸದ್ಯ ವ್ಯಾಕ್ಸಿನ್ ಬಗ್ಗೆ ಜನರಲ್ಲಿ ಯಾವುದೇ ಆತಂಕ ಬೇಡ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ಕೋವಿಶೀಲ್ಡ್ ಲಸಿಕೆ ಡಿಸಿಜಿಐ ಪರವಾನಿಗಿ ಕೊಟ್ಟಿದೆ 1.1 ಕೋಟಿ ಡೋಸ್ ಲಸಿಕೆಯನ್ನ ಕೇಂದ್ರ ಖರೀದಿಸಿದೆ. ಇಷ್ಟೊಂದು ಲಸಿಕೆ ಬೇರೆಯಾವ ದೇಶವೂ ಖರೀದಿಸಿಲ್ಲ 210 ರೂಗೆಯಿಗೆ ಒಂದು ಡೋಸ್ ಲಸಿಕೆ ಖರೀದಿಸಲಾಗಿದೆ. ಖರೀದಿ ವೆಚ್ಚ 231 ಕೋಟಿ ರೂ ಆಗಿದೆ ಎಂದರು.
ಒಂದು ವೈಲ್ ನಲ್ಲಿ 5 ಎಂಎಲ್ ಇರುತ್ತದೆ. ಇದನ್ನ 10 ಜನರಿಗೆ ಕೊಡಬಹುದು. 28 ದಿನದ ಬಳಿಕ 2ನೇ ಡೋಸ್ ಕೊಡಬೇಕಾಗುತ್ತದೆ. ಇದರ ಮೇಲೆ ಮಾರಟಕ್ಕಲ್ಲ ಎಂದು ಬರೆಯಲಾಗಿದೆ. ಯಾವುದೇ ಅಡ್ಡಪರಿಣಾಮವಾಗದ ರೀತಿ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಲಸಿಕೆ ಬಗ್ಗೆ ಜನರಲ್ಲಿ ಯಾವುದೇ ಆತಂಕ ಬೇಡ ಎಂದು ಸಚಿವ ಸುಧಾಕರ್ ಭರವಸೆ ನೀಡಿದರು.
Key words: 231 crore – purchase – Cowshield vaccine-people – vaccine – Minister- Sudhakar