ಮೈಸೂರು,ಮೇ,23,2023(www.justkannada.in): ಹೆಚ್.ಡಿ.ಕೋಟೆ ಮತ್ತು ಜಿಲ್ಲಾ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 25 ಕೋಟಿ ರೂ. ಬೆಲೆಬಾಳುವ ಅಂಬರ್ ಗ್ರೀಸ್ ವಶಕ್ಕೆ ಪಡೆದು ಮೂವರನ್ನ ಬಂಧನ ಬಂಧಿಸಿದ್ದಾರೆ.
ಜಿಲ್ಲೆಯಾದ್ಯಂತ ನಡೆದ ಪ್ರಕರಣಗಳ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ ಸೀಮಾ ಲಟ್ಕಾರ್, ಕೇರಳ ರಾಜ್ಯದ ಕೊಚ್ಚಿನ್ ಸಮುದ್ರದಿಂದ ತಿಮಿಂಗಿಲದ ಅಂಬರ್ ಗ್ರೀಸ್ ತಂದಿರುವ ಮಾಹಿತಿ ಲಭ್ಯವಾದ ಹಿನ್ನೆಲೆ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 25 ಕೋಟಿ ಬೆಲೆಬಾಳುವ ಒಂಬತ್ತುವರೆ ಕೆಜಿ ಅಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿದೆ. ಕೇರಳ ಮೂಲದ ಮೂವರ ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಕೇರಳ ಮೂಲದ ಮೂವರು ಆರೋಪಿಗಳ ಪೈಕಿ ಇಬ್ಬರು ಹಡಗು ನಡೆಸುವ ನಾವಿಕರಾಗಿದ್ದಾರೆ. ಅಂಬರ್ ಗ್ರೀಸ್ ವಿದೇಶದಲ್ಲೂ ಅಪಾರವಾದ ಬೇಡಿಕೆ ಮತ್ತು ಅಧಿಕ ಬೆಲೆ ಕೂಡ ಇದೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಆರೋಪಿಗಳನ್ನ ನೀಡಲಾಗಿದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಕಳ್ಳತನ ಹಾಗೂ ಕಾಣೆಯಾದ ಮೊಬೈಲ್ ಪೋನ್ ಗಳ ವಶ.
ಹಾಗೆಯೇ ಮೈಸೂರಿನಲ್ಲಿ ಕಳ್ಳತನ ಹಾಗೂ ಕಾಣೆಯಾದ ಮೊಬೈಲ್ ಪೋನ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಮೈಸೂರು ಜಿಲ್ಲೆಯಾದ್ಯಂತ 9 ಲಕ್ಷ ಮೌಲ್ಯದ 50 ಮೊಬೈಲ್ ಫೋನ್ ಗಳನ್ನ ವಶ ಪಡೆಯಲಾಗಿದ್ದು, ಈಗಾಗಲೇ 5 ಲಕ್ಷ ಮೌಲ್ಯದ 30 ಫೋನ್ ಗಳನ್ಮು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಗಳಿಂದ ಫೋನ್ ಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ ಎಂದು ಸೀಮಾ ಲಟ್ಕಾರ್ ಮಾಹಿತಿ ನೀಡಿದರು.
ಡ್ರಾಪ್ ಕೇಳಿವ ನೆಪದಲ್ಲಿ ಆಟೋ ಚಾಲಕನ ದರೋಡೆ: ಓರ್ವನ ಬಂಧನ.
ಇನ್ನು ಡ್ರಾಪ್ ಕೇಳಿವ ನೆಪದಲ್ಲಿ ಆಟೋ ಚಾಲಕನನನ್ನು ದರೋಡೆ ಮಾಡಿದ್ದ ಇಬ್ಬರ ಪೈಕಿ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಇದೇ ತಿಂಗಳು 18ರಂದು ಪ್ರಕರಣ ನಡೆದಿತ್ತು. ಆಟೋ ಡ್ರೈವರ್ ಅನ್ನು ಚಾಕು ಹಿಡಿದು ಹೆದರಿಸಿ 2 ಸಾವಿರ ನಗದು ಒಂದು ಮೊಬೈಲ್ ಪೋನ್ ಹಾಗೂ ಆಟೋವನ್ನು ಕಸಿದು ದರೋಡೆಕೋರರು ಪರಾರಿಯಾಗಿದ್ದರು. ಈ ಬಗ್ಗೆ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂದ ಪ್ರಮುಖ ಆರೋಪಿಯನ್ನ ಬಂಧಿಸಲಾಗಿದ್ದು, ಆರೋಪಿ ಇದೇ ರೀತಿ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಅನೇಕ ಕೃತ್ಯಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸ್ ಇಲಾಖೆ ಬಲೆ ಬೀಸಿದೆ ಎಂದು ಮೈಸೂರು ಎಸ್.ಪಿ ಸೀಮಾ ಲಟ್ಕಾರ್ ಮಾಹಿತಿ ನೀಡಿದರು.
Key words: 25 Crore -Rs. Valuable -Amber Greece –Seized- Three Arrest-mysore