ಹೊಸೂರು,ಜನವರಿ,22,2021(www.justkannada.in): ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಸುಮಾರು 25 ಕೆ.ಜಿ ಚಿನ್ನ ಮತ್ತು ನಗದನ್ನ ದೋಚಿ ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಹೊಸೂರು ಬಳಿಯ ಬಾಗಲೂರಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮುತೂಟ್ ಫೈನನ್ಸ್ ಕಚೇರಿಗೆ ನುಗ್ಗಿದ ಐದು ಮಂದಿ ದರೋಡೆಕೋರರು ಅಲ್ಲಿನ ವ್ಯವಸ್ಥಾಪಕ ಶ್ರೀನಿವಾಸ್ ರಾಘವ್ ಸೇರಿ ಸಿಬ್ಬಂದಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ಸಿಬ್ಬಂದಿಯನ್ನ ಹಗ್ಗದಿಂದ ಕಟ್ಟಿದ್ದಾರೆ.
ನಂತರ ಕಚೇರಿಯಲ್ಲಿದ್ದ 25 ಕೆಜಿ ಚಿನ್ನ ಮತ್ತು 96 ಸಾವಿರ ನಗದನ್ನ ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Key words: 25 kg –gold- cash –robbery- Muthoot Finance- office