ಭಾರತದಲ್ಲಿ ಒಟ್ಟು 28 ಕೊರೋನಾ ಸೋಂಕಿತರು ಪತ್ತೆ-ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ದನ್…

ನವದೆಹಲಿ,ಮಾ,4,2020(www.justkannada.in) ಭಾರತದಲ್ಲಿ ಒಟ್ಟು 28 ಕೊರೋನಾ ಸೋಂಕಿತರು ಪತ್ತೆಯಾಗಿದ್ದು ಈ ಪೈಕಿ ಭಾರತೀಯರಲ್ಲಿ 12  ವಿದೇಶಿಯರಲ್ಲಿ 16 ಮಂದಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ದನ್ ತಿಳಿಸಿದರು.

ಕೊರೋನಾ ವೈರಸ್ ಭೀತಿ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ದನ್, ದೆಹಲಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ್ದೆವೆ.  ಆಸ್ಪತ್ರೆಗಳಲ್ಲಿ ಸೌಲಭ್ಯ ಹೆಚ್ಚಿಸಿದ್ದೇವೆ.  ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ಗೆ ಸೂಚಿಸಿದ್ದೇವೆ. ದೆಹಲಿಯಲ್ಲಿ ಒಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.  ಅವರು 66 ಜನರನ್ನ ಭೇಟಿಯಾಗಿರುವ ಮಾಹಿತಿ ಇದೆ ಎಂದರು.

ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.. ಭಾರತದಲ್ಲಿ  28 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. 12 ಭಾರತೀಯರು 16 ವಿದೇಶಿಯರಲ್ಲಿ ಸೋಂಕು ಪತ್ತೆಯಾಗಿದೆ.  ಐಟಬಿಪಿಗೆ ಕಳುಹಿಸಿದ್ದ 21 ಮಂದಿಯಲ್ಲಿ 15 ಮಂದಿಗೆ ಸೋಂಕು ಪತ್ತೆಯಾಗಿದ್ದು,   14 ಮಂದಿ ಇಟಲಿ 1ಮಂದಿ ಭಾರತೀಯನಲ್ಲಿ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಸಚಿವ ಹರ್ಷವರ್ದನ್ ತಿಳಿಸಿದರು.

ಜನರು ಯಾವುದೇ ರೀತಿ ಆತಂಕಗೊಳ್ಳುವ ಅಗತ್ಯವಿಲ್ಲ. ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಸೋಂಕಿನಿಂದ ರಕ್ಷಿಸಿಕೊಳ್ಳಲು ನೀವು ಎಚ್ಚರಿಕೆಯಿಂದಿರಬೇಕು. ಜನರ ಬಳಿ ಕೈಕುಲುಕು ಬದಲು ನಮಸ್ತೆ ಎಂದು ಹೇಳಿ.  ಜನ ಸಂದಣಿಯಿಂದ ದೂರ ಇರಿ. ಪಾರ್ಟಿ ಸಮಾರಂಭಗಳಿಂದ ಅದಷ್ಟು ದೂರಾ ಇರಿ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ದನ್ ಸಲಹೆ ನೀಡಿದರು.

Key words: 28 coronavirus- infections – detected – India-Union Health Minister- Harshvardhan,