ಬೆಂಗಳೂರು,ಫೆಬ್ರವರಿ,4,2022(www.justkannada.in): ಜನವರಿ 26ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಟ್ಯಾಬ್ಲೋಗೆ 2ನೇ ಬಹುಮಾನ ದೊರಕಿದೆ.
ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದಿಂದ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಟ್ಯಾಬ್ಲೋವನ್ನ ಪ್ರದರ್ಶಿಸಲಾಗಿತ್ತು ಇದೀಗ ಟ್ಯಾಬ್ಲೋಗೆ ದ್ವಿತೀಯ ಬಹುಮಾನ ದೊರೆತಿದ್ದು ಈ ಕುರಿತು ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗಣರಾಜ್ಯೋತ್ಸವದ ಈ ಬಾರಿಯ ಪೆರೇಡ್ ನಲ್ಲಿ ಕರ್ನಾಕಟದ ಕರ್ನಾಟಕ ಕರಕುಶಲ ಕಲಾ ವೈಭವದ ಕರ್ನಾಟಕ ಕರಕುಶಲ ವಸ್ತುಗಳ ತೊಟ್ಟಿಲು ಸ್ತಬ್ದ ಚಿತ್ರಕ್ಕೆ 2ನೇ ಬಹುಮಾನ ಬಂದಿದ್ದು ಸಮಸ್ತ ಕನ್ನಡಿಗರಿಗೆ ಅಭಿಮಾನದ ವಿಷಯ ಮತ್ತು ವೋಕಲ್ ಫಾರ್ ಲೋಕಲ್ ನ ಸ್ಪೂರ್ತಿ ರಾಷ್ಟ್ರಾಧ್ಯಂತ ಪ್ರಸರಿಸಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವಿಟ್ಟರ್ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ, ಕರ್ನಾಟಕದ ಸ್ತಭ್ದ ಚಿತ್ರ ‘ಸಾಂಪ್ರದಾಯಕ ಕರಕುಶಲ ವಸ್ತುಗಳ ತೊಟ್ಟಿಲು’ ಎರಡನೇ ಸ್ಥಾನಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಗೌರವವೂ ನಮ್ಮೆಲ್ಲರನ್ನು Vocal For Local ಆಗಲು ಪ್ರೇರೇಪಿಸಲಿ. ನಮ್ಮ ರಾಜ್ಯದ ಕರಕುಶಲಕರ್ಮಿಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಿ ಎಂಬುದಾಗಿ ತಿಳಿಸಿದ್ದಾರೆ.
Key words: 2nd – state- tablo- Republic Day