ಕ್ರೈಸ್ಟ್ ಚರ್ಚ್ , ಮಾರ್ಚ್ 01, 2020 (www.justkannada.in): ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೊಂಚ ಮುನ್ನಡೆ ಸಾಧಿಸಿದೆ.
ಹ್ಯಾಗ್ಲೀ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್’ ಮನ್’ ಗಳು ವೈಫಲ್ಯ ಅನುಭವಿಸಿದರೂ ಬೌಲರ್ ಗಳು ಅಮೋಘ ಪ್ರದರ್ಶನ ನೀಡಿದರು.
ಪರಿಣಾಮ ನ್ಯೂಜಿಲೆಂಡ್ 235 ರನ್ಗೆ ಆಲೌಟ್ ಆಗಿದ್ದು, 7 ರನ್ಗಳ ಹಿನ್ನಡೆ ಅನುಭವಿಸಿದೆ. ನಿನ್ನೆ ಟೀಂ ಇಂಡಿಯಾವನ್ನು 242 ರನ್ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತ್ತು.
ಎರಡನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್ಗಳ ದಾಳಿಗೆ ನಲುಗಿ ಹೋಯಿತು. ಇಂದು 3 ರನ್ ಗಳಿಸುವಷ್ಟರಲ್ಲಿ ಕಿವೀಸ್ 30 ರನ್ ಗಳಿಸಿದ್ದ ಟಾಮ್ ಬ್ಲಂಡೆಲ್ ವಿಕೆಟ್ ಕಳೆದುಕೊಂಡಿತು.
ಅಂತಿಮವಾಗಿ ನ್ಯೂಜಿಲೆಂಡ್ 73.1 ಓವರ್ನಲ್ಲಿ 235 ರನ್ಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ 3, ರವೀಂದ್ರ ಜಡೇಜಾ 2 ಮತ್ತು ಉಮೇಶ್ ಯಾದವ್ 1 ವಿಕೆಟ್ ಪಡೆದರು.