2ನೇ ಟೆಸ್ಟ್ ಪಂದ್ಯದಲ್ಲೂ ಭಾರತಕ್ಕೆ ಸೋಲು: ಸರಣಿ ಗೆದ್ದ ಕಿವೀಸ್ ಪಡೆ

ಪುಣೆ,ಅಕ್ಟೋಬರ್,26,2024 (www.justkannada.in):  ಪುಣೆಯಲ್ಲಿ ನಡೆದ ಭಾರತದ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್  113 ರನ್ ಗಳಿಂದ ಜಯ ಸಾಧಿಸಿ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಕ್ಕೆ ಪಡೆದುಕೊಂಡಿದೆ.

ಪ್ರವಾಸಿ ನ್ಯೂಜಿಲ್ಯಾಂಡ್‌ ಮಾಡಿದ ಸ್ಪಿನ್ ಮೋಡಿಗೆ ಸಿಲುಕಿದ ಕ್ಯಾಪ್ಟನ್ ರೋಹಿತ್ ನೇತೃತ್ವದ ಭಾರತ ತಂಡ 114 ರನ್ ಗಳಿಂದ ಸೋಲನುಭವಿಸಿದೆ. ಮೊದಲ ಇನ್ನಿಂಗ್ಸ್ ಬ್ಯಾಂಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ 259 ರನ್ ಬಾರಿಸಿತ್ತು. ನಂತರ ಮೊದಲ ಇನ್ನಿಂಗ್ಸ್ ನಲ್ಲಿ  ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿ 156 ರನ್ ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ನ್ಯೂಜಿಲ್ಯಾಂಡ್ 103 ರನ್‌ ಮುನ್ನಡೆ ಸಾಧಿಸಿತು.

ನಂತರ 2ನೇ ಇನ್ನಿಂಗ್ಸ್ ಬ್ಯಾಟಿಂಗ್‌ ಆರಂಭಿಸಿದ್ದ ನ್ಯೂಜಿಲ್ಯಾಂಡ್‌ ಎರಡನೇ ಇನ್ನಿಂಗ್ಸ್‌ ನಲ್ಲಿ 255 ರನ್‌ ಪೇರಿಸಿತು. ಈ ಮೂಲಕ ಭಾರತಕ್ಕೆ 359 ರನ್‌ ಗುರಿ ನೀಡಿತ್ತು. ಆದರೆ ಮತ್ತೊಮ್ಮೆ ಅಗ್ರ ಕ್ರಮಾಂಕದ ಬ್ಯಾಟರ್‌ ಗಳ ವೈಫಲ್ಯದ ಕಾರಣದಿಂದ ಭಾರತವು 245 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ಇದರೊಂದಿಗೆ ಕಿವೀಸ್‌ 114 ರನ್‌ ಅಂತರದಿಂದ ಪಂದ್ಯ ಗೆದ್ದು ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್‌ ಸರಣಿ ಜಯಿಸಿತು.

Key words: 2nd Test, India lose,  New Zealand, win, series