ದೇಶದಲ್ಲಿ ಒಂದೇ ದಿನದಲ್ಲಿ 30,549 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ.

ನವದೆಹಲಿ,ಆಗಸ್ಟ್,3,2021(www.justkannada.in): ದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ 40 ಸಾವಿರ ದಾಟುತ್ತಿದ್ದ ಒಂದು ದಿನದ ಕೊರೋನಾ ಸೋಂಕಿನ ಪ್ರಕರಣ ಇದೀಗ ಸ್ವಲ್ಪ ಇಳಿಕೆ ಕಂಡಿದೆ. ಹೌದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 30,549 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಕಳೆದ 24 ಗಂಟೆಯಲ್ಲಿ 422 ಜನರು ಕೊರೋನಾಗೆ ಬಲಿಯಾಗಿದ್ದು,  ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 425195ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 404958 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 38887 ಜನರು ಗುಣಮುಖರಾಗಿದ್ದಾರೆ.

ದೇಶದಲ್ಲಿ ಈವರೆಗೆ 30896354 ಜನರು ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ದೇಶದಲ್ಲಿ 16,49,295 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ದೇಶದಲ್ಲಿ ಈವರೆಗೆ 47,85,44,114 ಜನರಿಗೆ  ಕೊರೋನಾ ಲಸಿಕೆ ನೀಡಲಾಗಿದೆ.

ENGLISH SUMMARY…

30,549 COVID positive cases registered in a single day in India
New Delhi, August 3, 2021 (www.justkannada.in): The daily number of new COVID cases that had crossed forty thousand in the country has declined a little. In the last 24 hours, 30,549 new cases were registered in the country, according to the information provided by the Union Health Ministry.
In the last 24 hours, 422 people have lost their lives to COVID increasing the tally to 4,25,195. The number of active cases across the country is 4,04,958 and 38,887 people have recovered in the same period.
The total number of people who have recovered and been discharged from the hospitals in the country has increased to 3,08,96,354.
COVID tests were conducted on 16,49,295 people across the country. The total number of people who have taken COVID vaccine has increased to 47,85,44,114.
Keywords: COVID-19 Pandemic/ country/ status/ 30,549

Key words: 30,549 Covid positive- cases -detected – single day – country.