ರಾಜ್ಯದಲ್ಲಿ ಮಳೆಯಿಂದಾಗಿ 32 ಮಂದಿ ಸಾವು: ಮೂರು ಜಿಲ್ಲೆಗಳಲ್ಲಿ 355 ಹೆಕ್ಟೇರ್ ಬೆಳೆ ನಾಶ- ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ.

ಉಡುಪಿ,ಜುಲೈ,13,2022(www.justkannada.in):  ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಈವರೆಗೆ 32 ಮಂದಿ ಮೃತಪಟ್ಟಿದ್ದಾರೆ. ಐವರು ಕಾಣೆಯಾಗಿದ್ದು, 34 ಮಂದಿ ಗಾಯಗೊಂಡಿದ್ದಾರೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಉಡುಪಿಯಲ್ಲಿ ಅಧಿಕಾರಿಗಳ ಜತೆ ಸಭೆ ಬಳಿಕ ಮಾತನಾಡಿ ಮಳೆಹಾನಿ ಬಗ್ಗೆ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಸಕ್ತ ವರ್ಷದಲ್ಲಿ ಜುಲೈ ತಿಂಗಳಿನಲ್ಲಿ ಭಾರಿ ಮಳೆಯಾಗಿದೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ 300 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ 355 ಹೆಕ್ಟರ್ ಬೆಳೆ ನಾಶವಾಗಿದ್ದು,  1,062 ಮನೆಗಳಿಗೆ ಹಾನಿಯಾಗಿದೆ. ರಾಜ್ಯದ ವಿವಿಧೆಡೆ 14 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ. 4 ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡಗಳು, 4 ರಾಜ್ಯ ವಿಪತ್ತು ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಜುಲೈ ತಿಂಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ  ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  429, ಉತ್ತರ ಕನ್ನಡ 437 ಉಡುಪಿಯಲ್ಲಿ 296 ಮನೆಗ ಕುಸಿದಿವೆ. ಕರಾವಳಿಯಲ್ಲಿ 2187 ರಸ್ತೆಗಳು ಹಾನಿಗೊಳಗಾಗಿದ್ದು, 168 ಸೇತುವೆ ಹಾಳಾಗಿವೆ. ಮನೆ ಬಿದ್ದ ತಕ್ಷಣ 10 ಸಾವಿರ ಪರಿಹಾರಕ್ಕೆ  ಸೂಚನೆ ನೀಡಲಾಗಿದೆ.  ಮನೆ ಕುಸಿದರೆ 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: 32 people-died – rain – state-CM -Bommai

ENGLISH SUMMARY…

32 people have lost lives in the State due to rain: 355 hectare crop loss in three districts – CM Bommai
Udupi, July 13, 2022 (www.justkannada.in): Chief Minister Basavaraj S. Bommai today informed that 32 people have lost their lives due to rain in the State, and 34 have been injured.
He spoke to the media persons after an official meeting held at Udupi today. “The State witnessed heavy rain this year in July. About 300 people have been rescued and shifted to safer places. 355 hectares of crops have been lost in coastal districts including Udupi, Uttara Kannada and Dakshin Kannada. About 106 houses have been damaged, and relief camps have been opened at 14 different places across the State. Four national disaster management teams and 4 State teams are engaged in rescue operations. Four districts have witness more than normal rainfall,” he explained.
“While 429 houses in Dakshin Kannada are damaged, 437 in Uttara Kannada and 296 houses in Udupi have been destroyed. 2187 roads and 168 bridges are damaged. I have asked to provide Rs.10,000 immediate compensation to the victims who have lost their houses. We will also provide a sum of Rs. 5 lakh to those who lose their houses,” added.
Keywords: CM Bommai/ Udupi/ rain/ 32 people die