ಮಂಡ್ಯ,ಸೆಪ್ಟಂಬರ್,12,2020(www.justkannada.in): ಡ್ರಗ್ಸ್ ದಂಧೆಯಲ್ಲಿ 32 ರಾಜಕಾರಣಿಗಳು ಭಾಗಿಯಾಗಿದ್ದಾರೆ. ದಾಖಲೆ ಸಮೇತ 32 ಜನರ ಲಿಸ್ಟ್ ಕೊಡುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಡ್ರಗ್ಸ್ ದಂಧೆಯಲ್ಲಿ ಬರೋಬ್ಬರಿ 32 ರಾಜಕಾರಣಿಗಳು ಭಾಗಿಯಾಗಿದ್ದಾರೆ, ಈ ಬಗ್ಗೆ ಗೃಹಸಚಿವರಿಗೆ ದಾಖಲೆ ಸಹಿತ ಲಿಸ್ಟ್ ಕೊಡ್ತೀನಿ ಎಂದು ಹೇಳಿದ್ದಾರೆ.
ಡ್ರಗ್ಸ್ ದಂಧೆ ಎಲ್ಲಾ ಕಡೆಗಳಲ್ಲೂ ಇದೆ. ಡ್ರಗ್ಸ್ ದಂಧೆ ಬಗ್ಗೆ ಪೊಲೀಸರಿಗೂ ಗೊತ್ತು. ಆದರೆ ರಾಜಕಾರಣಿಗಳು ಪೊಲೀಸರ ಕೈ ಅನ್ನ ಕಟ್ಟಿಹಾಕಿದ್ದಾರೆ. ರಾಜಕಾರಣಿಗಳದ್ದೇ ಪಬ್, ಕ್ಲಬ್, ಬಾರ್ಗಳಿವೆ. ಅವರಿಗೆ ಸಾವಿರಾರು ಕೋಟಿ ರೂ. ವ್ಯಾಪಾರ ಆಗುತ್ತಿರುವುದೇ ಡ್ರಗ್ಸ್‌ನಿಂದ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.
ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹ್ಮದ್ ಇರುವುದು ಸತ್ಯ. ಡ್ರಗ್ಸ್ ದಂಧೆಯಲ್ಲಿ ಜಮೀರ್ ಪಾತ್ರ ಶೇ.100ರಷ್ಟು ಇದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಅವರನ್ನು ಅರೆಸ್ಟ್ ಮಾಡ್ತಿಲ್ಲ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
Key words: 32 politicians- involved – drug dealing-srirama sene –chief-Pramod Muthalik