ಬೆಂಗಳೂರು,ಜೂನ್,20,2022(www.justkannada.in): 33 ಸಾವಿರ ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಲಾಗುತ್ತಿದೆ. ಕರ್ನಾಟಕ ರಾಜ್ಯದ ಅಭಿವೃದ್ದಿಗೆ ಇಂದಿನ ಕಾರ್ಯಕ್ರಮ ಅತಿಮುಖ್ಯ. ಕರ್ನಾಟಕದ ಇತಿಹಾಸದಲ್ಲೇ ಇದು ಹೊಸ ಮೈಲಿಗಲ್ಲು ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.
ಕೊಮ್ಮಘಟದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಾಡಗೀತೆಯೊಂದಿಗೆ ಆರಂಭಗೊಂಡ ಸಮಾವೇಶವದಲ್ಲಿ ಬಹುನಿರೀಕ್ಷಿತ ವಿವಿಧ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು. ಪೂರ್ಣಗೊಂಡ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. ಜತೆಗೆ ಹಲವು ಮಹತ್ತರ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಮೈಸೂರು ಪೇಟ, ಶಾಲು ತೊಡಿಸಿ ಪ್ರಧಾನಿ ಮೋದಿ ಅವರಿಗೆ ಸನ್ಮಾನಿಸಲಾಯಿತು. ಬಳಿಕ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಬ್ ಅರ್ಬನ್ ರೈಲು ಯೋಜನೆಗೆ ಮೋದಿ ಶಿಲನ್ಯಾಸ ನೆರವೇರಿಸಲಿದ್ದಾರೆ. ಬೆಂಗಳೂರಿನ ಅಭಿವೃದ್ದಿಗೆ ಮಹತ್ವದ ಯೋಜನೆ ಇದಾಗಿದೆ. ಇದು ಸಂಚಾರ ದಟ್ಟಣೆಗೆ ಇತಿಶ್ರೀ ಹಾಡಲಿದೆ. ಪ್ರಧಾನಿ ಮೋದಿ ಯೋಜನೆಯನ್ನ ರಾಜ್ಯಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ. ದೂರದೃಷ್ಠಿ ನಾಯಕತ್ವದಿಂದ ಮಾತ್ರ ಇದು ಸಾಧ್ಯವಾಗುತ್ತದೆ ಎಂದರು.
ಬೆಂಗಳೂರಿನ ಇತಿಹಾಸದಲ್ಲೇ ಸುರ್ವಣಾಕ್ಷರದಲ್ಲಿ ಬರದಿರುವ ದಿನ. 4 ದಿಕ್ಕಿನಲ್ಲಿ ಬೆಂಗಳೂರಿನ ವಿವಿಧ ಭಾಗಗಳಿಗೆ ಸಂಪರ್ಕಿಸುವ ಯೋಜನೆ ಇದಾಗಿದೆ. ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಗಾಗಿ ರೈಲು ಯೋಜನೆ ಜಾರಿಯಾಗಲಿದೆ. ಮೋದಿಯವರ ದೂರದೃಷ್ಠಿಯ ಯೋಜನೆಗಳು ಜಾರಿಯಾಗುತ್ತಿದೆ ಎಂದರು.
ರಾಜಕಾರಣಿ ಕಣ್ಣು ಚುನಾವಣೆ ಮೇಲೆ ಇರುತ್ತದೆ ಆದರೆ ಮುತ್ಸದ್ಧಿ ನಾಯಕನ ಕಣ್ಣು ಅಭಿವೃದ್ಧಿ ಮೇಲಿರುತ್ತೆ. ಮೋದಿ ಅವರದ್ದು ಕೇವಲ ದೊಡ್ಡ ಯೋಜನೆಗಳಲ್ಲ. ಎಲ್ಲಾ ಸಂಪನ್ಮೂಲಗಳನ್ನ ಬಳಸಿಕೊಳ್ಳುವ ಯೋಜನೆ . ರಾಜ್ಯದ ಎಲ್ಲಾ ಯೋಜನೆಗಳಿಗೆ ಸಹಾಯ ಹಸ್ತ ನೀಡಿದ್ದಾರೆ. ಬಡವರು ರೈತರಿಗೆ ಹಲವು ಕಾರ್ಯಕ್ರಮ ಜಾರಿಗೊಳಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ನುಡಿದರು.
Key words: 33 thousand –crores-development projects- CM Basavaraja Bommai-PM modi