ನವದೆಹಲಿ,ಏಪ್ರಿಲ್,24,2021(www.justkannada.in): ದೇಶದಲ್ಲಿ ಕೊರೋನಾ 2ನೇ ಅಲೆ ಜೋರಾಗಿದ್ದು, ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ ಹೊಸ ಕೊರೋನಾ ಪ್ರಕರಣ 3 ಲಕ್ಷ ದಾಟಿದೆ.
ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಒಂದೇ ದಿನದಲ್ಲಿ 3,46,786 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,66,10,481ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ 2,624 ಜನರು ಕೊರೋನಾಗೆ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,89,544 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ 1,38,67,997 ಸೋಂಕಿತರು ಗುಣಮುಖರಾಗಿದ್ದು, 25,52,940 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 2,19,838 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ದೇಶದಲ್ಲಿ ಈವರೆಗೆ 13,83,79,832 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.
ENGLISH SUMMARY…
3,46,786 new COVID cases in the country in the last 24 hours!
New Delhi, Apr. 24, 2021 (www.justkannada.in): The number of COVID infections is increasing in the country day by day. The total number of new COVID cases in the country in a single day cross the 3 lakh mark in the last 24 hours!
The Union Health and Family Welfare Department have informed that 3,46,786 new cases were reported in the last 24 hours, increasing the total tally of infected persons to 1,66,10,481. At the same time, 2,624 people lost their lives due to the pandemic increasing the tally to 1,89,544.
1,38,67,997 COVID patients have recovered and there are 25,52,949 active cases in the country. In the last 24 hours, 2,19,838 people have recovered and COVID vaccination is provided to 13,83,79,832 people in the country till now.
Keywords: COVID-19 Pandemic/ total cases in a single day cross 3 lakh/ Union Health and Family Welfare Department/ last 24 hours
Key words: 3,46,786 corona- cases – detected- one day-country