ಬೆಂಗಳೂರು, ಜೂನ್ 25, 2020 (www.justkannada.in): ಕಪೀಲ್ ದೇವ್ ಮುಂದಾಳತ್ವದ ಭಾರತ ಕಪ್ ಎತ್ತಿ ಸಂಭ್ರಮಿಸಿ ಇಂದಿಗೆ (ಜೂನ್ 25)ಕ್ಕೆ 37 ವರ್ಷ ತುಂಬುತ್ತಿದೆ.
60 ಓವರ್ಗಳ ಪಂದ್ಯದಲ್ಲಿ ವಿಂಡೀಸ್ ಕ್ಯಾಪ್ಟನ್ ಕ್ಲೈವ್ ಲಾಯ್ಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದರು.
ಭಾರತ ಬ್ಯಾಟಿಂಗ್ ಗೆ ಇಳಿದಿದ್ದರೂ ಸಹ ಕೇವಲ 183 (54.4 ಓವರ್) ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಭಾರತದ ಪರ ಮಾಚಾರಿ ಶ್ರೀಕಾಂತ್ ಮಾತ್ರ 38 ರನ್ ಗಳಿಸಿದ್ದು ( 57 ಎಸೆತ) ಅತ್ಯದ್ಭುತ ಸಾಧನೆ ಆಗಿತ್ತು.
ಅಂದಿನ ಟೀಂ ಇಂಡಿಯಾ ನಾಯಕನಾಗಿದ್ದ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಇಂಡೀಸ್ ತಂಡವನ್ನು 43 ರನ್ ಗಳ ಅಂತರದಲ್ಲಿ ಮಣಿಸಿ ವಿಶ್ವಕಪ್ ಪ್ರಶಸ್ತಿ ತಮ್ಮದಾಗಿಸಿಕೊಂಡಿತ್ತು. ಜಾಗತಿಕ ಮಟ್ಟದಲ್ಲಿ ಭಾರತ ಕ್ರಿಕೆಟ್ ನ ದಿಕ್ಕು ಬದಲಿಸಿದ ಈ ಪ್ರಥಮ ವಿಶ್ವಕಪ್ ವಿಜಯ ದೇಶದ ಕ್ರಿಕೆಟ್ ಅಭಿಮಾನಿಗಳಲ್ಲಿ ಸ್ಮರಣೀಯವಾಗಿ ಉಳಿದಿದೆ.