ದೇಶದಲ್ಲಿ ಕೊರೋನ ಏರಿಳಿಕೆ: ಕಳೆದ 24 ಗಂಟೆಯಲ್ಲಿ 37,593 ಮಂದಿಗೆ ಸೋಂಕು ದೃಢ

ನವದೆಹಲಿ,ಆಗಸ್ಟ್,25,2021(www.justkannada.in):   ದೇಶದಲ್ಲಿ ನಿನ್ನೆ ಕಡಿಮೆ ಪ್ರಮಾಣದಲ್ಲಿ ದೃಢವಾಗಿದ್ದ ಕೊರೋನಾ ಸೋಂಕಿನ  ಪ್ರಮಾಣ  ಇದೀಗ ಮತ್ತೆ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 37,593 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಒಂದೇ ದಿನದಲ್ಲಿ 37,593 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಈ ಅವಧಿಯಲ್ಲಿ 648 ಮಂದಿ ಕೋವಿಡ್ ಸೋಂಕಿತರು  ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ 34,169 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಭಾರತದಲ್ಲಿ ಈವೆರೆಗೆ ಒಟ್ಟು 3,25,12,366 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 4,35,758 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 3,22,327 ಸಕ್ರಿಯ ಪ್ರಕರಣಗಳಿದ್ದು, 3,17,54,281 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ENGLISH SUMMARY….

National Corona graph: 37,593 new COVID cases registered in one day
New Delhi, August 25, 2021 (www.justkannada.in): The COVID-19 Pandemic fluctuation has started occurring again in the country. 37,593 new cases were reported across the country in the last 24 hours.
According to the information provided by the Union Health Ministry, 648 people have lost their lives due to the pandemic and 34,169 people have recovered and have been discharged from the hospitals in the last 24 hours.
The total number of COVID cases in the country has increased to 3,25,12,366, out of which 4,35,758 have lost their lives. Presently there are 3,22,327 active cases and 3,17,54,281 people have recovered completely.
Keywords: COVID-19 Pandemic/ fluctuation/ country

key words: 37,593 -people-coronavirus -last 24 hours